ಸುಳ್ಯ ಬೀರಮಂಗಲ ನಿವಾಸಿ ದಿ. ಕಜೆ ಗುಡ್ಡಪ್ಪ ಗೌಡರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ನಾರಾಯಣಿ ಯವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ನಿಧನರಾಗಿರುತ್ತಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು.
ಇವರ ಅಂತ್ಯಸಂಸ್ಕಾರ ಇಂದು ಅವರ ಸ್ವಗೃಹದಲ್ಲಿ ನಡೆಯಲಿರುವುದು. ಮೃತರು ಮಕ್ಕಳಾದ ಶಶಿಧರ ಕಜೆ, ಶಿವಪ್ರಸಾದ್ ಕಜೆ ಹಾಗೂ ಮಗಳು ಶ್ರೀಮತಿ ಸಂಧ್ಯಾ ಕಿಶೋರ್ ಕುಮಾರ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿರುತ್ತಾರೆ.