ಅಧ್ಯಕ್ಷರಾಗಿ ನವಾಝ್ ಪಂಡಿತ್ ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಜಯನಗರ
ಜಯನಗರ ಜನ್ನತುಲ್ ಉಲೂಮ್ ಮಸ್ಟಿದ್ & ಮದರಸ ಕಮಿಟಿ.ರಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಮಾರ್ಚ್ 8 ರಂದು ಮದರಸ ಸಭಾಂಗಣದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಮಹಮ್ಮದ್ ಮುಟ್ಟೆತೋಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಳೀಯ ಸದರ್ ಮುಅಲ್ಲಿಂ ಮಹಮ್ಮದ್ ಶಫೀಕ್ ಸಕಾಫಿ ದುವಾ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು. ಕಳೆದ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡನೆಯನ್ನು ಕಾರ್ಯದರ್ಶಿ ಹಸೈನಾರ್ ಜಯನಗರ ಮಂಡಿಸಿ ಸಭೆಯಲ್ಲಿ ಸರ್ವರ ಒಮ್ಮತದ ಪ್ರಕಾರ ಮಂಜೂರು ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಕುರಿತು ಚರ್ಚೆ ನಡೆದು ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಿತು.
ಬಳಿಕ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ನವಾಜ್ ಪಂಡಿತ್, ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಜಯನಗರ,ಕೋಶಾಧಿಕಾರಿಯಾಗಿ ಇಬ್ರಾಹಿಂ ಪಂಡಿತ್, ಉಪಾಧ್ಯಕ್ಷರಾಗಿ ಜಾಹಿರ್ ಜಯನಗರ,ಮದರಸ ಉಸ್ತುವಾರಿ ಜಬ್ಬಾರ್ ಡಿಎಂ, ಜೊತೆ ಕಾರ್ಯದರ್ಶಿಗಳಾಗಿ ಜಝೀಲ್ ಅಝೀಜ್,ಮಹಮ್ಮದ್ ಶಫೀಕ್, ನಿರ್ದೇಶಕರುಗಳಾಗಿ ಮಹಮ್ಮದ್ ಮುಟ್ಟತ್ತೋಡಿ,ಅಬ್ದುಲ್ಲಾ ಹಾಜಿ, ಅಬೂಬಕ್ಕರ್ ಡಿ ಎಂ,ರಫೀಕ್ ಫ್ರೂಟ್ಸ್, ಮುನೀರ್ ಆಟೋ,ಶಿಯಾಬ್ ಜಯನಗರ,ನೌಶಾದ್ ನಿಸರ್ಗ, ಉಬೈದುಲ್ಲಾ, ರಿಯಾಜ್, ಫೈಸಲ್ ಕ್ಯಾಶ್ಯು ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ನೂತನ ಸಮಿತಿಗೆ ಲೆಕ್ಕಪತ್ರ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.