ದುಬೈನಲ್ಲಿ ಕಾಡು ಬೆಳೆಸಲು ಡಾ. ಆರ್.ಕೆ. ನಾಯರ್ ಅವರಿಗೆ ರಾಜನ ಆಹ್ವಾನ !

0

ಅರಬ್ ದೇಶದಲ್ಲೂ ಅರಳಲಿದೆ ಸುಳ್ಯದ ಸಾಧಕನ ಹಸಿರು ವನ

ದುಬೈನಲ್ಲಿ ಮಿಯಾವಾಕಿ ಕಾಡು ಬೆಳೆಸಲು ದುಬೈ ರಾಜರಿಂದ ಗ್ರೀನ್ ಹೀರೋ ಆಫ್ ಇಂಡಿಯಾ, ಸುಳ್ಯದ ಡಾ. ಆರ್.ಕೆ.ನಾಯರ್ ಅವರಿಗೆ ಆಹ್ವಾನ ಬಂದಿದೆ.

ಇತ್ತೀಚೆಗೆ ಭಾರತ್ ಆಗ್ರೋ ಸುವರ್ಣ ವರ್ಷಾಚರಣೆ ಅಂಗವಾಗಿ ನಡೆದ ಕೃಷಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್. ಕೆ. ನಾಯರ್ ಈ ವಿಷಯ ಬಹಿರಂಗ ಪಡಿಸಿದರು.

” ದುಬೈನಲ್ಲಿ ಕಾಡು ಬೆಳೆಸಲು ರಾಜನ ಕಚೇರಿ ಮೂಲಕ ಆಹ್ವಾನ ಬಂದಿದೆ. ಈ ಹಿಂದೆ ಎರಡು ದೇಶದವರು ಅಲ್ಲಿ ಈ ಪ್ರಯತ್ನ ಮಾಡಿದ್ದರೂ ಸಫಲತೆ ಕಂಡಿಲ್ಲ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನಾನು ಬೆಳೆಸಿರುವ ಅರಣ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಅವರು ಈ ಆಹ್ವಾನ ನೀಡಿದ್ದಾರೆ. ಶೀಘ್ರವೇ ಅಲ್ಲಿಗೆ ತೆರಳಿ, ಬಳಿಕ ಸರ್ವೆ ಕಾರ್ಯ ನಡೆಸಲಾಗುವುದು. ಇದು ಸುಳ್ಯದವನೊಬ್ಬನಿಗೆ ದೊರೆತ ಅವಕಾಶವಾಗಿದ್ದು ಸುಳ್ಯಕ್ಕೆ ಹೆಮ್ಮೆಯ ವಿಷಯ ಅಂತ ಭಾವಿಸ್ತೇನೆ ಎಂದು ಆರ್.ಕೆ.ನಾಯರ್ ಹೇಳಿದರು.

ಮಿಯಾವಕಿ ಅರಣ್ಯವನ್ನು ಆಯಾ ಪ್ರದೇಶದ ಬೌಗೋಳಿಕತೆಗೆ ಅನುಗುಣವಾಗಿ ತನ್ಮದೇ ಆದ ಶೈಲಿಯಲ್ಲಿ ಬದಲಾಯಿಸಿ ಅರಣ್ಯ ಬೆಳೆಸುತ್ತಿರುವ ಆರ್.ಕೆ.ನಾಯರ್ 12 ಕ್ಕೂ ಹೆಚ್ಚು ರಾಜ್ಯಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಗಿಡ ಬೆಳೆಸಿದ್ದಾರೆ.