ಮಾ.೮ ರಂದು ಶಿವರಾತ್ರಿಯ ದಿನದಂದು ಜಾಲ್ಸೂರು ಗ್ರಾಮದ ಕೆಮನಬಳ್ಳಿ ರಘುನಾಥ ಬಲ್ಯಾಯ (ರಿಕ್ಷಾ ರಘು) ರವರ ತೋಟಕ್ಕೆ ಕಿಡಿಗೇಡಿಗಳು ಬಂದು ತೆಂಗಿನ ಮರದಿಂದ ಬೊಂಡ ಹೊತ್ತೊಯ್ದ ಘಟನೆ ವರದಿಯಾಗಿದೆ.
ರಾತ್ರಿ ಸುಮಾರು ೧೨.೩೦ ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ರಘುನಾಥರು ತಮ್ಮ ಜಾಗಕ್ಕೆ ಅಳವಡಿಸಿದ್ದ ಸೋಲಾರ್ ಬೇಲಿಗೆ ಮರದ ತೊಂಡೊಂದನ್ನು ಇಟ್ಟು ಕಿಡಿಗೇಡಿಗಳು ಜಾಗ ಪ್ರವೇಶ ಮಾಡಿದ್ದಾರೆ. ಬಳಿಕ ತೆಂಗಿನ ಮರವೊಂದಕ್ಕೆ ಏರಿ ಮರದಿಂದ ೧೩ ಬೊಂಡಗಳನ್ನು ತೆಗೆದಿದ್ದಾರೆ. ಅಲ್ಲದೆ ಬೆಳೆಯದೇ ಇದ್ದ ಬೊಂಡವನ್ನು ಕಡಿದು, ಅದರ ಚಿಪ್ಪಿಯನ್ನು ಅಲ್ಲೆ ಎಸೆದಿದ್ದಾರೆಂದು ತಿಳಿದುಬಂದಿದೆ.
“ಶಿವರಾತ್ರಿಯಂದು ಕಿಡಿಗೇಡಿಗಳು ಮನೆಯ ಜಾಗಕ್ಕೆ ಬಂದು ಬೊಂಡ ತೆಗೆದಿರುವುದು ನನಗೆ ಬೇಸರವಿಲ್ಲ. ಆದರೆ ಇನ್ನೂ ಬೆಳೆಯದಿರುವ ಬೊಂಡ ಕೀಳಬಾರದಿತ್ತು. ಸೋಲಾರ್‌ನ ಬ್ಯಾಟರಿಯೂ ಹೋಗಿದೆ. ಈ ರೀತಿ ಉಪದ್ರ ಮಾಡಬಾರದು. ಕೃತ್ಯ ಎಸೆಗಿದವರು ತಪ್ಪೊಪ್ಪಿಕೊಳ್ಳದಿದ್ದರೆ ನಾನು ಕಾನತ್ತೂರಿನಲ್ಲಿ ಪ್ರಮಾಣ ಮಾಡಲಿzನೆ” ಎಂದು ರಘುನಾಥರು ಹೇಳಿದ್ದಾರೆ.