ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ ENCEA ದ ಉದ್ಘಾಟಣಾ ಸಮಾರಂಭ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “Aarav” ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಸಮಾರಂಭದ ಮುಖ್ಯ ಅತಿಥಿ ನಿಶ್ಮಿತಾ ಕೆ. ಅಸೋಶಿಯೇಟ್ ಆರ್&ಡಿ ಇಂಜಿನಿಯರ್, ಡೆಸಾಲ್ಟ್ ಸಿಸ್ಟಮ್ಸ್, ಪುಣೆ ಈ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಪ್ರಾರಂಭದಿಂದಲೇ ಕೌಶಲ್ಯ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದರಿಂದ ಉನ್ನತ ಸಾಧನೆ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಮಾತನಾಡಿ ಇ&ಸಿ ವಿಭಾಗವು ಎಲ್ಲಾ ವಿಧಗಳಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಶೇಕಡಾ ೧೦೦ ದಾಖಲಾತಿಯನ್ನು ಸಾಧಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ವಹಿಸಿದ್ದರು. ಇ&ಸಿ ವಿಭಾಗದ ಮುಖ್ಯಸ್ಥ ಡಾ. ಕುಸುಮಾಧರ್ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ನಿಶ್ಮಿತಾರನ್ನು ಅವರ ಉನ್ನತ ಸಾಧನೆಗಾಗಿ ಸನ್ಮಾನಿಸಲಾಯಿತು.
ENCEA ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರ್ಶಿತ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಥಮ್ ವಂದಿಸಿದರು. ಸಂಯೋಜಕರಾದ ಪ್ರೊ. ರೇಖಾ ಎಂ.ಬಿ., ಡಾ. ಸವಿತಾ ಎಂ. ಮತ್ತು ಎಲ್ಲಾ ಉಪನ್ಯಾಸಕ ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂತಿಮ ವರ್ಷದ ವಿದ್ಯಾರ್ಥಿನಿ ಸೃಷ್ಠಿ ನಿರೂಪಿಸಿದಳು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Home ಪ್ರಚಲಿತ ಸುದ್ದಿ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇ&ಸಿ ಇಂಜಿನಿಯರಿಂಗ್ ಆಸೋಸಿಯೇಶನ್‌ನ ಪದಾಧಿಕಾರಿಗಳ ಪದಗ್ರಹಣ ಮತ್ತು ಸ್ವಾಗತ ಕಾರ್ಯಕ್ರಮ