ಶಾಂತಿನಗರ ಮಡಪುರಂ ನಲ್ಲಿ ಮುತ್ತಪ್ಪ- ತಿರುವಪ್ಪ ದೈವಗಳ ಭಕ್ತಿ ಸಂಭ್ರಮದ ನೇಮೋತ್ಸವ-

0

ಮೆರುಗು ನೀಡಿದ ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ

ಸುಳ್ಯ ಕಸಬಾದ ಶಾಂತಿನಗರ ಮಡಪುರಂ ಕ್ಷೇತ್ರದ ಶ್ರೀ ಮುತ್ತಪ್ಪ -ತಿರುವಪ್ಪ ದೈವರಾಧನಾ ಸೇವಾ ಸಮಿತಿ ಮತ್ತು ಮುತ್ತಪ್ಪ-ತಿರುವಪ್ಪ ಉತ್ಸವ ಸಮಿತಿ ಹಾಗೂ ಮಹಿಳಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ
ಮಾ.9 ಮತ್ತು 10 ರಂದು ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವವು ಭಕ್ತಿ ಸಂಭ್ರಮದಿಂದ ಜರುಗಿತು.

ಮಾ.9 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಬೆಳಗ್ಗಿನಿಂದ ಸಂಜೆಯ ತನಕ ಭಜನಾ ಕಾರ್ಯಕ್ರಮವು ನಡೆಯಿತು. ಸಂಜೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಆಕರ್ಷಕ ಕುಣಿತ ಭಜನೆಯು ಪ್ರದರ್ಶನವಾಯಿತು.
ಬಳಿಕ ದೈವಸ್ಥಾನದಲ್ಲಿ ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೈವದ ಮಲೆಯರ್ಕಲ್ ನಡೆಯಿತು. ಬಳಿಕ
ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು.
ರಾತ್ರಿ ಮುತ್ತಪ್ಪನ್ ದೈವದ ನೇಮವು ನಡೆದು ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಕಳಿಕಪಾಟ್ ಕಳಸ ಶೃಂಗಾರ ರುಮಾಲು ಕಟ್ಟುವ ಕಾರ್ಯಕ್ರಮ ನಡೆಯಿತು.
ಮರುದಿನ ಪ್ರಾತ :ಕಾಲದಲ್ಲಿ
ಶ್ರೀ ಮುತ್ತಪ್ಪ -ತಿರುವಪ್ಪ ದೈವಗಳ ನೇಮೋತ್ಸವವು ಜರುಗಿತು. ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನ ಪ್ರಸಾದ ವಿತರಣೆಯಾಯಿತು.

ರಾತ್ರಿ ಸಮಯದಲ್ಲಿ
ಧಾರ್ಮಿಕ ಸಭೆಯು
ಮುತ್ತಪ್ಪ -ತಿರುವಪ್ಪ ದೈವರಾಧನಾ ಸೇವಾ ಸಮಿತಿ ಅಧ್ಯಕ್ಷ ಮಧುಸೂದನ್ ಪಿ.ಯಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಎಸ್.ಅಂಗಾರ ರವರು ಆಗಮಿಸಿದ್ದರು.
ವೇದಿಕೆಯಲ್ಲಿ ಸುಳ್ಯ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಕೆ.ಕೆ ಬಾಲಕೃಷ್ಣ ಉಪಸ್ಥಿತರಿದ್ದರು.
ದೈವರಾಧನಾ ಸಮಿತಿ ಮತ್ತು ಉತ್ಸವ
ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಮಹಿಳಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದರು.
ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಪರಿಸರವನ್ನು ವಿಸ್ತಾರಗೊಳಿಸಲಾಗಿದ್ದು ಅಚ್ಚು ಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ನಿರಂತರವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.