ಮಾ. 16ರ ತನಕ ಪಿಲಿಕಜೆಯಲ್ಲಿ ಎನ್.ಎಂ.ಸಿ. ಎನ್. ವಿಶೇಷ ಶಿಬಿರ

0

ಎನ್.ಎಸ್.ಎಸ್. ಹೊಸತನ್ನು ಕಲಿಸುತ್ತದೆ: ಕೆ.ವಿ. ಹೇಮನಾಥ್

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ನಾವು ಹೊಸತ್ತನ್ನು ಕಲಿಯುತ್ತೇವೆ. ಶಿಬಿರಾರ್ಥಿಗಳಿಗೆ ವಿಶೇಷವಾದ ಅನುಭವವನ್ನು ನೀಡುತ್ತದೆ. ಜೀವನದಲ್ಲಿ ಒಂದು ಗುರಿಯನ್ನು ಹೊಂದಿ ಮುನ್ನಡೆದರೆ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯ ಎಂದು ಎ.ಒ.ಎಲ್.ಇ. ಕಾರ್ಯದರ್ಶಿ ಕೆ.ವಿ. ಹೇಮನಾಥ್ ಹೇಳಿದರು. ಅವರು ಮಾ. 10ರಂದು ಅಮರ ಮುಡ್ನೂರು ಗ್ರಾಮದ ಪಿಲಿಕಜೆಯಲ್ಲಿ ನಡೆದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 46ನೇ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮರ ಮುಡ್ನೂರು ಗ್ರಾ.ಪಂ‌. ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ, ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ. ಬಾಲಚಂದ್ರ ಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಕೆ.ವಿ.ಜಿ. ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು, ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಅನ್ನಸಂತರ್ಪಣಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗೌಡ ಕೊಡ್ತುಗುಳಿ, ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಬಿ, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಮುರಳಿ ನಳಿಯಾರು, ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಕಾರ್ಯಾಧ್ಯಕ್ಷ ಗಣೇಶ್ ಪಿಲಿಕಜೆ, ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ಮಾರಾಟಾಧಿಕಾರಿ ಆದರ್ಶ ಬೊಳ್ಳೂರು ಮತ್ತು ಎ.ಒ.ಎಲ್.ಇ. ನಿರ್ದೇಶಕಿ ಶ್ರೀಮತಿ ಮೀನಾಕ್ಷಿ ಕೆ.ಹೆಚ್ ಭಾಗವಹಿಸಿದ್ದರು.


ಶಿಬಿರಾಧಿಕಾರಿಗಳಾದ ಶ್ರೀಮತಿ ಚಿತ್ರಲೇಖ ಕೆ.ಎಸ್. ಸ್ವಾಗತಿಸಿ, ಸಂಜೀವ ಕುದ್ಪಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಗಾನ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ನಾಯಕರುಗಳಾದ ಕೀರ್ತನ್ ಡಿ, ದೀಪ್ತಿ ಎ.ಎನ್, ಪ್ರಸಾದ್ ಕೆ.ಎನ್ ಮತ್ತು ರಕ್ಷಿತಾ ಕೆ ವೇದಿಕೆಯಲ್ಲಿ ಆಸೀನರಾಗಿದ್ದರು. ಶಿಬಿರಾರ್ಥಿ ಕೀರ್ತನ್ ಕೆ.ವಿ. ಹೇಮನಾಥರನ್ನು ಸಭೆಗೆ ಪರಿಚಯಿಸಿದರು.

ಸುದ್ದಿಪತ್ರಿಕೆಯ ಡಾ. ಯು.ಪಿ. ಶಿವಾನಂದರ ಸರಕಾರಿ ಅಧಿಕಾರಿಗಳಿಂದ ಲಂಚ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸುತ್ತಾರೆ. ಶಿವಾನಂದರು ತಿರುಗಿ ಹೋಗುವಾಗ ಇವರ ಕೈ ತಿರುಗುತ್ತದೆ. ನೀವೆಲ್ಲಾ ವಿದ್ಯಾರ್ಥಿಗಳು ಮುಂದೆ ಲಂಚ ಭ್ರಷ್ಟಾಚಾರಕ್ಕೆ ಎಡೆ ಕೊಡಬೇಡಿ. ಸರಕಾರಿಂದ ಪಡೆಯುವ ಸಂಬಳಕ್ಕೆ ನಿಷ್ಠಾವಂತ ಸೇವೆ ಸಲ್ಲಿಸಿ – ಪ್ರೊ. ಬಾಲಚಂದ್ರ ಗೌಡ