ಶೌರ್ಯ ವಿಪತ್ತು ತಂಡದ ಸಹಕಾರ
ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಾತ್ಸಲ್ಯ ಯೋಜನೆಯಡಿ ಅಜ್ಜಾವರ ಗ್ರಾಮದ ಮೇನಾಲ ಭಾಗೀರಥಿ ಯವರ ಮನೆ ರಿಪೇರಿಗೆ ಅನುದಾನ ಮಂಜೂರುಗೊಂಡಿದ್ದು, ಶೌರ್ಯ ವಿಪತ್ತು ತಂಡದವರು ಈ ಕೆಲಸವನ್ನು ಶ್ರಮ ಸೇವೆಯ ಮೂಲಕ ನಿರ್ವಹಿಸಿದ್ದಾರೆ.
ನಿರಂತರವಾಗಿ ನಾಲ್ಕು ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಶಕ್ತ ಕುಟುಂಬವಾದ ಮೇನಾಲ ಕಾರ್ಯಕ್ಷೇತ್ರದ ಭಾಗೀರಥಿಯವರಿಗೆ ಪ್ರತಿ ತಿಂಗಳು ಮಾಶಾಸನ ಒದಗಿಸಲಾಗುತ್ತಿತ್ತು. ಇದರ ಜೊತೆಗೆ ಪ್ರತಿ ತಿಂಗಳು ಇವರ ಆರೋಗ್ಯಕ್ಕೆ ಪೂರಕವಾಗಿ ಪೌಷ್ಟಿಕಾಂಶ ವುಳ್ಳ ವಾತ್ಸಲ್ಯ ಮಿಲೆಟ್ ಕಿಟ್ ನ್ನು ಕೂಡ ಮಾತೃಶ್ರೀ ಹೇಮಾವತಿ ಅಮ್ಮನವರು ನೀಡುತ್ತಿದ್ದು ವರ್ಷಕ್ಕೆ ಎರಡು ಬಾರಿ ಬಟ್ಟೆ ನೀಡುತ್ತಿದ್ದಾರೆ. ಈ ಮನೆಯ ಅಡುಗೆ ಮನೆ ರಿಪೇರಿ ಮತ್ತು ನೀರಿನ ಟ್ಯಾಂಕ್ ಅಳವಡಿಕೆ ಮನೆಯ ದುರಸ್ತಿ ಮತ್ತು ಪೈಂಟಿಂಗ್ ಕೆಲಸವನ್ನು ಕ್ಷೇತ್ರದ ವತಿಯಿಂದ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆ ಯೋಜನೆ ಅಡಿಯಲ್ಲಿ ಮನೆ ರಿಪೇರಿಯನ್ನ ಶ್ರೀ ರಾಮ ಪ್ರಾಣ ಪ್ರತಿಷ್ಠೆಯ ದಿನವಾದ ಜನವರಿ 22ರಂದು ಚಾಲನೆ ನೀಡಲಾಗಿದ್ದು, ಇದೀಗ ಮನೆ ರಿಪೇರಿ ಪೂರ್ತಿಯಾಗಿದೆ. ಈ ಕೆಲಸಕ್ಕೆ ಶೌರ್ಯ ವಿಪತ್ತು ಘಟಕ ಮಂಡೆಕೋಲು ಮತ್ತು ಸ್ಥಳೀಯ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸೇವಾ ಪ್ರತಿನಿಧಿಯವರು ಕೇಂದ್ರ ಒಕ್ಕೂಟದ ಅಧ್ಯಕ್ಷರು ಸಹಕಾರ ನೀಡಿ ಈ ಕೆಲಸವನ್ನು ಸಂಪೂರ್ಣಗೊಳ್ಸಲು ಕೈಜೋಡಿಸಿದ್ದರು.