ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳಕ್ಕೆ ಪ್ರಥಮ ಪ್ರಶಸ್ತಿ

0

ಮಾರ್ಚ್ 10 ರಂದು ಜಯನಗರದಲ್ಲಿ ಸುಳ್ಯ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಮತ್ತು ಮೈತ್ರಿ ಮಹಿಳಾ ಮಂಡಲ ಜಯನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಸದಸ್ಯೆಯರು ಪ್ರಥಮ ಬಹುಮಾನ ರೂ. 5000 ಮತ್ತು ಶಾಶ್ವತ ಫಲಕವನ್ನು ಪಡೆದುಕೊಂಡರು. ಈ ತಂಡದಲ್ಲಿ ಚಂದ್ರಾಕ್ಷಿ ಜೆ ರೈ, ಚಿತ್ರಲೇಖ ಮಡಪ್ಪಾಡಿ , ಜಯಂತಿ ಆರ್ ರೈ ,ಸುಮತಿ ರಘುನಾಥ, ಸುನಿತಾ ರಾಮಚಂದ್ರ, ರಂಜಿನಿ ಸಂಜೀವ, ರೇಖಾ ಸಂದೀಪ್ , ಸವಿತಾ ಲಕ್ಷ್ಮಣ, ಹರಿಣಾಕ್ಷಿ ಕ್ರಷ್ಣ ,ಸುಶೀಲ ಚಂದ್ರಶೇಖರ,ರಮ್ಯ, ರಜನಿ ಶುಭಕರ,ಅನನ್ಯ ಅನಿಲ್ ಭಾಗವಹಿಸಿದ್ದರು. ರಾಹುಲ್ ಎ ಆರ್ ನಿರ್ದೇಶಿಸಿದ್ದರು