ಅಜ್ಜಾವರ : 50 ಕುಟುಂಬಕ್ಕೆ ರಂಝಾನ್ ಕಿಟ್ ವಿತರಣೆ

0

ಅಲ್ ಅಮೀನ್ ಯoಗ್ ಮೆನ್ಸ್ ಅಸೋಸಿಯೇಷನ್‌ ಅಡ್ಕ ಅಜ್ಜಾವರ ವತಿಯಿಂದ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಮಾಡಲಾಯಿತು.

ಪ್ರತಿವರ್ಷ ರಂಜಾನ್ ನಲ್ಲಿ ರಂಜಾನ್ ಕಿಟ್ ಹಾಗೂ ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆ ಹಾಗೂ ಬಡ ರೋಗಿಗಳ ಔಷಧಿ ವೆಚ್ಚ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಈ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.

ರಂಜಾನ್ ಕಿಟ್ ವಿತರಣಾ ಸಂದರ್ಭದಲ್ಲಿ ಅಲ್ ಅಮೀನ್ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಕುಂಞ ಕೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಸಲೀಂ ಅಡ್ಕ ಕೆಎಂ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಹಾರಿಸ್ ಕಲ್ತಡ್ಕ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬೋಯ್ಕನಾ ಹಾಗೂ ಸ್ಥಳೀಯರು ಮಸೀದಿ ಇಮಾಮರಾದ ಮಹಮ್ಮದ್ ಅಲಿ ಉಸ್ತಾದ್ ವಿಕಾಯ ಕಾರ್ಯದರ್ಶಿ ಖಾದರ್ ತುಪ್ಪ ಕಲ್ ಹಾಗೂ ಅಲ್ ಅಮೀನ್ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.