ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ವತ್ರೆಯಲ್ಲಿ ಕಾನ್ಸ್-ಎಂಡೋ ಸಪ್ತಾಹ

0

ಸುಳ್ಯದ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ವತ್ರೆಯಲ್ಲಿ ಕಾನ್ಸ್-ಎಂಡೋ ಸಪ್ತಾಹವನ್ನು ಆಚರಿಸಲಾಯಿತು.

ಮಾರ್ಚ್ ೫ ರಿಂದ ಮಾರ್ಚ್ ೧೩ ರವರೆಗೆ ಉಚಿತ ಬಾಯಿಯ ಆರೋಗ್ಯ ಎಂಬ ಸರಣಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ತಪಾಸಣೆ ಮತ್ತು ಚಿಕಿತ್ಸೆ, ಬಾಯಿಯ ಆರೋಗ್ಯ ಮಾತುಕತೆ, ಸಿಡಿಇ ಕಾರ್ಯಕ್ರಮ, ಮೌಲ್ಯವರ್ಧಿತ ಕೋರ್ಸ್, ಇಂಟರ್ನ್ ತರಬೇತಿ ಕಾರ್ಯಕ್ರಮ, ಪ್ರೌಢಶಾಲಾ ಮಕ್ಕಳಿಗಾಗಿ ಅಂತರ ಶಾಲಾ ಪ್ರಬಂಧ ಸ್ವರ್ಧೆ, ಸುಳ್ಯ ತಾಲೂಕಿನಲ್ಲಿ ರಂಗೋಲಿ, ರೀಲ್ಸ್, ಡೆಂಟಲ್‌ನಂತಹ ಅಂತರ್ ಕಾಲೇಜು ಸ್ವರ್ಧೆಗಳು, ಛಾಯಾಗ್ರಹಣ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತ್ತು.


ಸಿ.ಡಿ.ಇ ಕಾರ್ಯಕ್ರಮವು ಮಾರ್ಚ್ ೭, ೨೦೨೪ ರಂದು ನಡೆಯಿತು. ವೈದ್ಯಕೀಯ ದಂತ ಪ್ರಾಕ್ಟೀಸ್‌ನಲ್ಲಿ ತುರ್ತು ಪರಿಸ್ಧಿತಿಗಳ ನಿರ್ವಹಣೆ ಎಂಬ ವಿಷಯದ ಮೇಲೆ ಡಾ. ಮಂಜುನಾಥ ರೈ
A.J. Institute of Dental Sciences, Mangalore,ಮಾಹಿತಿ ನೀಡಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಇದರ ಕಮಿಟಿ ‘ಬಿ’ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ., ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಮತ್ತು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲರನ್ನು ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ| ಕೃಷ್ಣಪ್ರಸಾದ್ ಎಲ್. ಸ್ವಾಗತಿಸಿದರು. ನಂತರ ಅತಿಥಿ ಭಾಷಣಕಾರರು ಉಪನ್ಯಾಸ ನೀಡಿದರು ಮತ್ತು ಡಾ. ಐಶ್ವರ್ಯ ವಂದನಾರ್ಪಣೆಗೈದರು.