ಬೆಳ್ಳಾರೆ ಬೂಡು ಶ್ರೀ ಆದಿನಾಗಬ್ರಹ್ಮ ಗರಡಿ ಮೊಗೇರ್ಕಳ ದೈವಗಳ ಪ್ರತಿಷ್ಠೆ – ಧಾರ್ಮಿಕ ಸಭಾ ಕಾರ್ಯಕ್ರಮ

0

ಹಲವಾರು ವರ್ಷಗಳಿಂದ ಹಿರಿಯರು ಆರಾಧಿಸಿಕೊಂಡು ಬರುತ್ತಿರುವ ದೈವಸ್ಥಾನ ಇಂದು ಅಭಿವೃದ್ಧಿ ಹೊಂದಿದೆ. ಹಿರಿಯರ ಪರಂಪರೆ,ಮಾರ್ಗದರ್ಶನ ಹಾಗೂ ಯುವಕರ ಶ್ರಮದಿಂದ ಇದು ಸಾಧ್ಯವಾಗಿದೆ.ಕುಗ್ರಾಮ ಇದ್ದದ್ದು ಇಂದು ಸುಗ್ರಾಮವಾಗಿದೆ, ಅಲ್ಲದೆ ಸಮಾಜದ ಅಭಿವೃದ್ಧಿಯಾಗಿದೆ ಎಂದು ಶಾಸಕಿ ಕು.ಭಾಗೀರಥಿ ಮುರುಳ್ಯ ಹೇಳಿದರು.


ಅವರು ಬೆಳ್ಳಾರೆ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಮಾ.13 ರಂದು ನಡೆದ ದೈವಗಳ ಪ್ರತಿಷ್ಠಾ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾಜಿ ಸಚಿವ ಎಸ್.ಅಂಗಾರ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.


ವಿಟ್ಲ ಉಪತಹಶೀಲ್ದಾರರಾದ ವಿಜಯ ವಿಕ್ರಮ್ ಗಾಂಧಿಪೇಟೆ ರಾಮಕುಂಜ ಇವರು ಉಪನ್ಯಾಸ ನೀಡಿದರು. ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಸುಂದರ ತೊಡಿಕಾನ ನೇತೃತ್ವ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ರವಿ ಮಡಿಕೇರಿ, ಪಚ್ಲಂಪಾರೆ ಉಪ್ಪಳ ಚೌಡಿ ಚಾಮುಂಡೇಶ್ವರಿ ಕ್ಷೇತ್ರದ ಆರಾಧಕರು ಧರ್ಮದರ್ಶಿಗಳಾದ ಬಾಬು ಯು ಉಪ್ಪಳ, ಸುಳ್ಯ ಎಲ್.ಡಿ.ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಬೀಡು, ಕರ್ನಾಟಕ ರಾಜ್ಯ ಮೊಗೇರ ಸಂಘದ ಸಂಚಾಲಕ ನಂದರಾಜ್ ಸಂಕೇಶ, ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ, ಮೊಗೇರ ಸಂಘದ ಅಧ್ಯಕ್ಷ ಕರುಣಾಕರ, ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಗೌರವಾಧ್ಯಕ್ಷ ಕರಿಯ ಬೀಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಉಪಾಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ, ಭಾಸ್ಕರ ಕುತ್ಯಾಳ, ಅಣ್ಣು ಪುಡ್ಕಜೆ, ನೇಮೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಬೀಡು,ಕಾರ್ಯದರ್ಶಿ ಹರೀಶ್ ದರ್ಖಾಸ್ತು, ಆಡಳಿತ ಸಮಿತಿ ಕಾರ್ಯದರ್ಶಿ ವಿಜಯ್ ಪಾಟಾಜೆ ಉಪಸ್ಥಿತರಿದ್ದರು.


ಸಾಗರ್ ಬೆಳ್ಳಾರೆ ಸ್ವಾಗತಿಸಿ, ಕವಿತಾ ಬೀಡಿ ಪ್ರಾರ್ಥಿಸಿ,ಪುರುಷೋತ್ತಮ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಿತೇಶ್ ಮ್ಯೂಸಿಕಲ್ಸ್ ಟೀಮ್ ಐವರ್ನಾಡು ಇವರಿಂದ ಭಕ್ತಿಗಾನ ಸುಧಾ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಆದಿನಾಗಬ್ರಹ್ಮ ಯಕ್ಷಗಾನ ಕಲಾ ಸಂಘ ಪೆರಾಜೆ ಇವರಿಂದ ತುಳು ಯಕ್ಷಗಾನ ಬಯಲಾಟ “ಬ್ರಹ್ಮ ಮೊಗೇರೆರ್” ನಡೆಯಿತು.