ಸುಳ್ಯ ರೋಟರಿ ಸಿಟಿ ಕ್ಲಬ್ ಗೆ ಜಿಲ್ಲಾ ಗವರ್ನರ್ ರೊ.ಹೆಚ್.ಆರ್.ಕೇಶವ ಭೇಟಿ ಕಾರ್ಯಕ್ರಮ

0

ಸುಳ್ಯ ರೋಟರಿ ಸಿಟಿ ಕ್ಲಬ್ ಇದರ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮ ಮಾ.14 ರಂದು ನಡೆಯಿತು. ಪೂರ್ವಾಹ್ನ ಸುಳ್ಯಕ್ಕೆ ಆಗಮಿಸಿದ ಗವರ್ನರ್ ರವರನ್ನು ಕ್ಲಬ್ ಸದಸ್ಯರು ಸ್ವಾಗತಿಸಿದರು.

ಬಳಿಕ ಅಲ್ಲಿಂದ ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ನಾರ್ಕೋಡು) ಗೆ ತೆರಳಿ ಸುಮಾರು 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಆಧುನಿಕ ಶೈಲಿಯ ಪುರುಷರಿಗೆ ನೀಲಿ ಮತ್ತು ಮಹಿಳೆಯರಿಗೆ ಪಿಂಕ್ ಬಣ್ಣದ ನೂತನ ಶೌಚಾಲಯವನ್ನು ಜಿಲ್ಲಾ ಗವರ್ನರ್ ರೊ. ಹೆಚ್.ಆರ್.ಕೇಶವ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಕ್ತ ವರ್ಗೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರೊ.ಗಿರೀಶ್ ನಾರ್ಕೋಡು ರವರು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ, ಕ್ಲಬ್ ಝೋನ್ 5 ರ ಅಸಿಸ್ಟೆಂಟ್ ಗವರ್ನರ್ ರೊ.ನರಸಿಂಹ ಪೈ, ಝೋನಲ್ ಲೆಫ್ಟಿನೆಂಟ್‌ ರೊ.ಸುಜಿತ್ ಪಿ.ಕೆ, ಶಿಕ್ಷಣ ಇಲಾಖೆಯ ಸಂಯೋಜಕಿ ಸವಿತಾ,ಶಾಲಾ ಮುಖ್ಯ ಶಿಕ್ಷಕಿ ಸುನಂದ, ಎಸ್.ಡಿ.ಎಂ.ಸಿ.ಅಧ್ಯಕ್ಷ ಹುಕ್ರಪ್ಪ ಪೂಜಾರಿ ಕುದ್ಕುಳಿ, ಕ್ಲಬ್ ಕಾರ್ಯದರ್ಶಿ ಚೇತನ್ ಪಿ.ಯಂ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರೊ. ಗಿರೀಶ್ ನಾರ್ಕೋಡು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುನಂದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರೊ.ಚೇತನ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳಾದ ಕು.ಆಶಿಕ ಮತ್ತು ಕು. ಮುಬಶಿರ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಶಾಲಾ ಅದ್ಯಾಪಕ ವೃಂದದವರು, ಎಸ್.ಡಿ.ಎಂ.ಸಿ.ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.