ಫ್ರೆಂಡ್ಸ್ ಕ್ಲಬ್ ಹುಳಿಯಡ್ಕ ಮಹಿಳಾ ಘಟಕ ಅಸ್ತಿತ್ವಕ್ಕೆ

0

ಅಧ್ಯಕ್ಷರಾಗಿ ಅನಿತ ಬೈತಡ್ಕ, ಕಾರ್ಯದರ್ಶಿ ಲಾವಣ್ಯ ಬೈತಡ್ಕ

ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನವಾದ ಮಹಿಳಾ ಘಟಕದ ಪದಗ್ರಹಣ ಸಮಾರಂಭವು ಸೂರ್ಯಮನೆ ಶೀನಪ್ಪ ರವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪುರುಷ ಘಟಕದ ಅಧ್ಯಕ್ಷ ರಮೇಶ್ ಪಾನತ್ತಿಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೀನಪ್ಪ ಸೂರ್ಯಮನೆ, ಫ್ರೆಂಡ್ಸ್ ಕ್ಲಬ್ ನ ಪುರುಷ ಘಟಕದ ಸದಸ್ಯರುಗಳಾದ ವಸಂತ ಕೋಲ್ಚಾರ್, ರಾಧಾಕೃಷ್ಣ ಬೈತಡ್ಕ ಉಪಸ್ಥಿತರಿದ್ದರು.
ಕ್ಲಬ್ ನ ನೂತನ ಅಧ್ಯಕ್ಷರಾಗಿ ಅನಿತ ಬೈತಡ್ಕ, ಕಾರ್ಯದರ್ಶಿ ಯಾಗಿ ಲಾವಣ್ಯ ಬೈತಡ್ಕ, ಖಜಾಂಜಿಯಾಗಿ ಶ್ವೇತ ಬೆಳ್ಳಿಪ್ಪಾಡಿ, ಉಪಾಧ್ಯಕ್ಷರಾಗಿ ಪ್ರೇಮಕಲಾ ಸುಳ್ಯಕೋಡಿ, ಜತೆ ಕಾರ್ಯದರ್ಶಿಯಾಗಿ ಸುಮನರವಿ ಇವರುಗಳು ಆಯ್ಕೆಯಾದರು.


ಸದಸ್ಯರುಗಳಾಗಿ ಪೂರ್ಣಿಮಾ ಪಾನತ್ತಿಲ, ಸ್ವಾತಿ ಬೈತಡ್ಕ, ಯಮುನಾ ಬೈತಡ್ಕ, ಸಂಧ್ಯಾ ಕೆದಂಬಾಡಿ, ಅಕ್ಷತಾ ಬಡ್ಡೆಕಲ್ಲು, ಜಯಂತಿ ಬಡ್ಡೆಕಲ್ಲು, ಸುಮಲತಾ, ಸವಿತಾ ಶಶಿಧರ, ಪ್ರೇಮಲತಾ ಬೈತ್ತಡ್ಕ , ಸರೋಜಿನಿ ಕಟ್ಟೆಕೊಚ್ಚಿ, ಶೈಲಜಾ ಶಂಕರ್, ನಳಿನಿ ಸೂರ್ಯಮನೆ, ಮಾಲಾಶ್ರೀ ಕೋಲ್ಚಾರ್, ಜಯಶ್ರೀ ಕೋಲ್ಚಾರ್, ದೀಪ್ತಿ ಎಚ್.ಆರ್, ಭಾರತಿ, ಲತಾ ಸೂರ್ಯಮನೆ, ಇವರುಗಳು ಆಯ್ಕೆಯಾದರು.