ನಾಳೆ (ಮಾ.16) ಸುಳ್ಯ ಲಯನ್ಸ್ ಕ್ಲಬ್ ಗೆ ಲಯನ್ಸ್ ರಾಜ್ಯಪಾಲರ ಭೇಟಿ

0

ಸುಳ್ಯ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲೆ 317 ಡಿ ಇದರ ಲಯನ್ಸ್ ಜಿಲ್ಲಾ ಗವರ್ನರ್ ಲ.ಡಾ. ಮೆಲ್ವಿನಾ ಡಿ ಸೇನಾ ರವರು ಮಾ.16ರಂದು ಅಧಿಕೃತ ಭೇಟಿ ನೀಡಲಿದ್ದಾರೆ

ಪೂ.10 ಕ್ಕೆ ಗವರ್ನರ್ ರನ್ನು ಸುಳ್ಯ ಪೈಚಾರಿನಲ್ಲಿ ಸ್ವಾಗತಿಸಲಾಗುವುದು. ಬಳಿಕ ಲಯನ್ಸ್ ಕ್ಲಬ್ ನಡೆಸುವ ಸೇವಾ ಚಟುವಟಿಕೆಗಳ ಮಾರ್ಗ ಸೂಚಿ ಫಲಕ ಉದ್ಘಾಟನೆ, ಸರಕಾರಿ ಪ್ರಾಥಮಿಕ ಶಾಲೆ ಕೊಡಿಯಾಲಬೈಲು ಇಲ್ಲಿಲಯನ್ಸ್ ಸಂಸ್ಥೆ ನಿರ್ಮಿಸಲಾದ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳ ತೋಟ ವೀಕ್ಷಣೆ. ಎಂಜಿಎಂ ಕೊಡಿಯಾಲಬೈಲು ಶಾಲೆಗೆ ಲಯನ್ಸ್ ಕೊಡುಗೆ ಹಸ್ತಾಂತರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಅರಂಬೂರು ಇಲ್ಲಿ ಲಯನ್ಸ್ ಕೊಡಮಾಡಿದ ಪ್ರವೇಶದ್ವಾರದ ಉದ್ಘಾಟನೆ. ಹಾಗೂ ಸಾಂದೀಪ ವಿಶೇಷ ಚೇತನ ಮಕ್ಕಳ ಶಾಲೆಗೆ ಬೇಟಿ ನೀಡಲಿರುವರು.
ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಯಲಿದ್ದು, ಸಂಜೆ ಸಭಾಕಾರ್ಯಕ್ರಮ ನಡೆಯುವುದು.