ಅಮೆರಿಕದ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರದೀಪ್ ಜೈನ್ ಬಲ್ನಾಡು ಪೇಟೆ

0

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರೇಟೆಜಿಕ್ ಲೀಡರಶಿಪ್ ಪ್ರೋಗ್ರಾಮ್ ಗೆ (strategic Leadership ) ಮರ್ಕಂಜ ದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ ಯಾಗಿದ್ದು ಇದರಲ್ಲಿ ಭಾಗವಹಿಸಲು ಶನಿವಾರ ಅಮೆರಿಕದ ಬೋಸ್ಟನ್ ಗೆ ತೆರಳಿದ್ದಾರೆ . ಇದೇ ಸಂದರ್ಭ ಅವರು ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನಿಗೂ ಭೇಟಿ ನೀಡಲಿದ್ದಾರೆ .

ದೇಶದಾದ್ಯಂತ 25 ರಾಜ್ಯಗಳಲ್ಲಿ 750 ಶಾಖೆಗಳನ್ನು ಹೊಂದಿರುವ ಉಜ್ಜಿವನ್ ಬ್ಯಾಂಕ್ ಇದರ ಹೌಸಿಂಗ್ ಲೋನ್ ವಿಭಾಗದ ರಾಷ್ಟ್ರಮಟ್ಟದ
ವ್ಯವಹಾರ ಮುಖ್ಯಸ್ಥರಾಗಿರುವ ಇವರು ಯಕ್ಷಗಾನ ಕಲಾವಿದ ಮರ್ಕಂಜ ಯುವರಾಜ ಜೈನ್ ಶ್ರೀಮತಿ ಪ್ರಸನ್ನ ದಂಪತಿಗಳ ಕಿರಿಯ ಪುತ್ರರಾಗಿದ್ದಾರೆ.