ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು, ಕೊಡಿಯಾಲ ಇದರ 22ನೇ ವಾರ್ಷಿಕೋತ್ಸವ, ಶ್ರೀ ವಿಶ್ವಕರ್ಮ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮ ಮಾ. 14ರಂದು ಕೊಡಿಯಾಲ ಗ್ರಾಮದ ನಿಡ್ಮಾರು ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ನಿವೇಶನದಲ್ಲಿ ನಡೆಯಿತು. ಬೆಳಿಗ್ಗೆ ವಿಶ್ವಕರ್ಮ ಪೂಜೆ ಆರಂಭಗೊಂಡಿತು.
ಪೂರ್ವಾಹ್ನ ಮಂಡಳಿಯ ಅಧ್ಯಕ್ಷ ಕೆ.ಎಚ್. ಮಧುಚಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಪುರೋಹಿತರಾದ ಗಿರೀಶ್ ನೆಟ್ಟಣಿಗೆ ಧಾರ್ಮಿಕ ಉಪನ್ಯಾಸ ನೀಡಿದರು. ಯುವ ಉದ್ಯಮಿ ಮಿಥುನ್ ಶೆಣೈ ಬೆಳ್ಳಾರೆ, ನಿವೃತ್ತ ತಹಶಿಲ್ದಾರ್ ಎಸ್. ರಾಘವೇಂದ್ರ, ಕೊಡಿಯಾಲದ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟಿನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ನಮಿತಾ ಪಿ. ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಾಟಿ ವೈದ್ಯ ದಿನೇಶ್ ಕುಮಾರ್ ಮಾಳರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಂಡಳಿಯ ಕೋಶಾಧಿಕಾರಿ ಶೇಷಪ್ಪ ಆಚಾರ್ಯ ನಿಡ್ಮಾರು ಪ್ರಾರ್ಥಿಸಿದರು. ಮಧುಚಂದ್ರ ಆಚಾರ್ಯ ಸ್ವಾಗತಿಸಿ, ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸ.ಹಿ.ಪ್ರಾ. ಶಾಲೆ ನೆಟ್ಟಾರು ಮತ್ತು ಸ.ಹಿ.ಪ್ರಾ. ಶಾಲೆ ದರ್ಖಾಸ್ತು ಇಲ್ಲಿನ 1ರಿಂದ 7ನೇ ತರಗತಿವರೆಗಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು.