ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಿನ್ನೆಲೆ

0

ಕುಂಬಳೆ ಸೀಮೆಗೊಳಪಡುವ ಅಡೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ – ಮಹಾವಿಷ್ಣು – ವಿನಾಯಕ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಹಸಿರುವಾಣಿ ಸಮರ್ಪಣಾ ಮೆರವಣಿಗೆಯನ್ನು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ಮಾ.16ರಂದು ಬೆಳಿಗ್ಗೆ ಸಮರ್ಪಿಸಲಾಯಿತು.

ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯ ವಸಂತ ಗಬ್ಬಲಡ್ಕ, ಕನಕಮಜಲು ಪ್ರಾದೇಶಿಕ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಪ್ರಧಾನ ಕಾರ್ಯದರ್ಶಿ ಈಶ್ವರ ಕೊರ್ಬಂಡ್ಕ, ಅವರ ನೇತೃತ್ವದಲ್ಲಿ ಊರ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮಂದಿರದಲ್ಲಿ ಅರ್ಚಕ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯ ಅವರಿಂದ ಶ್ರೀ ಆತ್ಮಾರಾಮ ದೇವರಿಗೆ ಮಹಾಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಗ್ರಾ.ಪಂ. ಸದಸ್ಯ ಶ್ರೀಧರ ಕುತ್ಯಾಳ, ಕನಕಮಜಲು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಕನಕಮಜಲು ಸಹಕಾರಿ ಸಂಘದ ಮಾಜಿ ನಿರ್ದೇಶಕ ದಿವಾಕರ ಕಾಳಪ್ಪಜ್ಜನಮನೆ, ಮಾಜಿ ಅಧ್ಯಕ್ಷ ಹರೀಶ್ ಮೂರ್ಜೆ , ತೀರ್ಥರಾಮ ಕಣಜಾಲು , ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕುತ್ಯಾಳ, ಕನಕಮಜಲು ಹಾಲು ಉತ್ಪಾದಕ ಸಂಘದ ನಿರ್ದೇಶಕ ಕುಸುಮಾಧರ ಬೊಮ್ಮೆಟ್ಟಿ, ಹೇಮಂತ್ ಮಠ, ಅವಿನ್ ಮಳಿ, ಸಂತೋಷ್ ನೆಡಿಲು, ವಿಜಯಕುಮಾರ್ ನರಿಯೂರು, ರವಿ ಕನ್ನಡ್ಕಮೂಲೆ, ಶಶಿಕುಮಾರ್ ಕನ್ನಡ್ಕ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.


ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಮಾ.11ರಂದು ಜಾತ್ರೋತ್ಸವವು ಪ್ರಾರಂಭಗೊಂಡಿದ್ದು, ಮಾ.17ರಂದು ರಾತ್ರಿ ಅಡೂರು ಬೆಡಿ ಸೇವೆ ಜರುಗಲಿದ್ದು, ಮಾ.20ರಂದು ಜಾತ್ರೋತ್ಸವವು ಸಂಪನ್ನಗೊಳ್ಳಲಿದೆ.