ಲಯನ್ಸ್ ಸಂಸ್ಥೆಯ ಗವರ್ನರ್ ಲ.ಡಾ.ಮೆಲ್ವಿನ್ ಡಿಸೋಜಾ ರವರ ಅಧಿಕೃತ ಭೇಟಿ ಕಾರ್ಯಕ್ರಮ ಇಂದು ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ನಡೆಯುತ್ತಿದ್ದು, ಸುಳ್ಯ ಲಯನ್ಸ್ ಕ್ಲಬ್‌ನಿಂದ ಅನುಷ್ಠಾನ ಮಾಡಲ್ಪಟ್ಟಿರುವ ಸಾರ್ವಜನಿಕ ಸೇವಾ ಕಾರ್ಯಗಳ ಉದ್ಘಾಟನೆಗಳು ನಡೆದಿದೆ.
ಸುಳ್ಯದ ಜಟ್ಟಿಪಳ್ಳ ಪ್ರದೇಶದಲ್ಲಿರುವ ಅಡ್ಡರಸ್ತೆಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ದಾನಿಗಳ ಸಹಕಾರ ಪಡೆದು ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದ್ದು, ಅವುಗಳ ಉದ್ಘಾಟನೆಯನ್ನು ಮತ್ತು ಕೊಡಿಯಾಲಬೈಲು ಸ.ಕಿ.ಪ್ರಾ. ಶಾಲಾ ಜಾಗದಲ್ಲಿ ಕ್ಲಬ್ ವತಿಯಿಂದ ನಿರ್ಮಿಸಿರುವ ಅಡಿಕೆ ತೋಟದ ವೀಕ್ಷಣೆಯನ್ನು ಗವರ್ನರ್ ಮಾಡಿದರು.
ಬಳಿಕ ಮಹಾತ್ಮಗಾಂಧಿ ಮಲ್ನಾಡ್ ಪ್ರೌಢಶಾಲೆಗೆ ಹೋದ ಲಯನ್ ಗವರ್ನರ್‌ರವರು ಕ್ಲಬ್ ನಿಂದ ನೀಡಿದ ೫೦ ಸಾವಿರ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗೆ ಅಳವಡಿಸಿದ ಟೈಲ್ಸ್ ಕಾಮಗಾರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಪದಾಧಿಕಾರಿಗಳಾದ ಓಸ್ವಾಲ್ಡ್ ಡಿಸೋಜಾ, ಸುಧಾಕರ ಶೆಟ್ಟಿ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಪ್ರಾಂತೀಯ ಅಧ್ಯಕ್ಷೆ ಲ.ಶ್ರೀಮತಿ ರೇಣುಕಾ ಸದಾನಂದ ಜಾಕೆ , ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮತ್ತು ಸುಳ್ಯದ ಬಹುತೇಕ ಹಿರಿಯ, ಕಿರಿಯ ಲಯನ್ ಸದಸ್ಯರು ಉಪಸ್ಥಿತರಿದ್ದರು.