ಬೆಳ್ಳಾರೆಯಲ್ಲಿ ಓಶನ್ ಬಾರ್ ಮತ್ತು ಫ್ಯಾಮಿಲಿ ಕಿಚನ್ ಶುಭಾರಂಭ

0

ಬೆಳ್ಳಾರೆಯ ಮುಖ್ಯ ರಸ್ತೆ ಅಮ್ಮು ರೈ ಕಾಂಪ್ಲೆಕ್ಸ್ ದೇವಿ ಹೈಟ್ಸ್ ನಲ್ಲಿ ಓಶನ್ ಬಾರ್ ಮತ್ತು ಫ್ಯಾಮಿಲಿ ಕಿಚನ್ ಮಾ.16 ರಂದು ಶುಭಾರಂಭಗೊಂಡಿತು. ಸುಳ್ಯ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ನೆಟ್ ಕಾಂ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಓಶನ್ ಬಾರ್ ಮತ್ತು ಫ್ಯಾಮಿಲಿ ಕಿಚನ್ ಇದರ ಮಾಲಕ ರಾಕೇಶ್ ಶೆಟ್ಟಿ ತಂಬಿನಮಕ್ಕಿಯವರು ಶುಭಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನವೀನ ರೈ ತಂಬಿನಮಕ್ಕಿ, ಪ್ರದೀಪ್ ಕಲ್ಲೋಣಿ, ಗಂಗಾಧರ ರೈ ಪುಡ್ಕಜೆ,ಜಗನ್ನಾಥ ಆಳ್ವ,ಪ್ರೇಮನಾಥ ಶೆಟ್ಟಿ, ಸುಧಾಕರ ಮಣಿಯಾಣಿ,ದಯಾಕರ ಆಳ್ವ,ನಾರಾಯಣ ಮಣಿಯಾಣಿ ಗೋರಿಗುಡ್ಡೆ,ರಾಧಾಕೃಷ್ಣ ಮಣಿಯಾಣಿ ಕೊಲ್ಯ,ಎ.ಕೆ.ಮಣಿಯಾಣಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.


ಇಲ್ಲಿ ನಾರ್ತ್ ಇಂಡಿಯನ್,ಸೌತ್ ಇಂಡಿಯನ್,ತಂದೂರಿ ಐಟಂ ಗಳು ದೊರೆಯುತ್ತದೆ.ಕ್ಯಾಟರಿಂಗ್ ವ್ಯವಸ್ಥೆ ಇದೆ.ಮತ್ತು ಲಾಡ್ಜಿಂಗ್,ಬೋರ್ಡಿಂಗ್ ಹಾಗೂ ಶುಭ ಸಮಾರಂಭಗಳಿಗೆ ಹಾಲ್ ವ್ಯವಸ್ಥೆ ಇದೆ ಎಂದು ಮಾಲಕರು ತಿಳಿಸಿದ್ದಾರೆ.