ಸುಳ್ಯ ಪಟ್ಟಣ ಪಂಚಾಯತ್‌ನ ಸದಸ್ಯರುಗಳನ್ನಾಗಿ ಮುಂದಿನ ಆದೇಶದವರೆಗೆ ರಾಜು ಪಂಡಿತ್ ಪಂಡಿತ್ ಕಾಂಪ್ಲೆಕ್ಸ್ ರಥಬೀದಿ, ಸಿದ್ದೀಕ್ ಕೊಕ್ಕೊ ನಾವೂರು ಗಾಂಧಿನಗರ ಮತ್ತು ಭಾಸ್ಕರ ಪೂಜಾರಿ ಬಾಜಿನಡ್ಕ ದುಗಲಡ್ಕ ಇವರನ್ನು ರಾಜ್ಯ ಸರಕಾರವು ನಾಮ ನಿರ್ದೇಶನ ಮಾಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಕೆಪಿಸಿಸಿ ಮುಖ್ಯ ವಕ್ತಾರ ಟಿ.ಎಂ. ಶಹೀದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಎಲ್‌ಸಿ ಹರೀಶ್‌ಕುಮಾರ್ ಮತ್ತು ಸ್ಪೀಕರ್ ಯು.ಟಿ.ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಪೌರಾಡಳಿತ ಸಚಿವ ರಹೀಂಖಾನ್ ಅವರು ಈ ನೇಮಕ ಮಾಡಿರುವುದಾಗಿ ತಿಳಿದು ಬಂದಿದೆ.