ದ.ಕ. ಸಂಪಾಜೆ ಗ್ರಾಮದ ಜನರ ಬಹು ದಿನಗಳ ಬೇಡಿಕೆಯಾದ ಗಡಿಕಲ್ಲು – ಮುಂಡ ಹವನಡ್ಕ, ಆಲಡ್ಕ ರಸ್ತೆ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು ಇತ್ತೀಚೆಗೆ ಉದ್ಘಾಟಿಸಿದರು.
ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅದಿಕಾರಿ ಶ್ರೀಮತಿ ಸರಿತಾ ಡಿಸೋಜಾ ಅವರು ಮಾತನಾಡಿ ಗ್ರಾ.ಪಂ. 5ನೇ ವಾರ್ಡಿನ ಸದಸ್ಯರುಗಳು ಕ್ರಿಯಾ ಯೋಜನೆ ಆದ ತಕ್ಷಣ ಕಾಮಗಾರಿ ಆರಂಭಿಸಿ ವೇಗವಾಗಿ ಕೆಲಸ ಮಾಡಿ ಉದ್ಘಾಟನೆ ಮಾಡಿದ್ದಾರೆ. ಗುತ್ತಿಗೆದಾರರು ಒಳ್ಳೆಯ ಕೆಲಸ ಮಾಡಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪಾಜೆ ಸೊಸೈಟಿ ಮಾಜಿ ವ್ಯವಸ್ಥಾಪಕ ಶಿವರಾಮ್ ಬಿ.ಆರ್., ಸಂಪಾಜೆ ಕಲ್ಲುಗುಂಡಿ ಸೊಸೈಟಿ ನಿರ್ದೇಶಕರಾದ ಹಮೀದ್ ಪಾಂಬಾರ್, ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ. ಹನೀಫ್, ಸದಸ್ಯರಾದ ಜಿ. ಕೆ. ಹಮೀದ್ ಗೂನಡ್ಕ, ಶ್ರೀಮತಿ ಸುಂದರಿ ಮುಂಡಡ್ಕ, ರಜನಿ, ವಿಜಯ ಆಲಡ್ಕ, ಜಗದೀಶ್ ರೈ, ವಿಮಲಾ ಪ್ರಸಾದ್, ಶೌವಾದ್ ಗೂನಡ್ಕ, ಅಬೂಸಾಲಿ ಪಿ. ಕೆ. ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್, ಕೆ. ಎಂ. ಆಶ್ರಫ್ ಗುತ್ತಿಗೆದಾರ ಅಶ್ರಫ್ ಸಂಟ್ಯಾರ್, ಯೂಸುಫ್ ಕಲ್ಲುಗುಂಡಿ, ಅಬ್ದುಲ್ ರಹಿಮಾನ್ ಎಸ್. ಪಿ. ಅಬ್ಬಾಸ್. ಕೆ. ಕೆ. ಸಂಪಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಹಮೀದಿಯಾ, ಅಂಗನವಾಡಿ ಕಾರ್ಯಕರ್ತರಾದ ಶೀಲಾವತಿ, ಪಂಚಾಯತ್ ಸಿಬ್ಬಂದಿ ಭರತ್, ಉಮೇಶ್, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ವಂದಿಸಿದರು.