ಐವರ್ನಾಡು ಗ್ರಾಮದ ಎಡಮಲೆ ಇರ್‍ವೆರ್ ಉಳ್ಳಾಕುಲು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮಾ.18 ಮತ್ತು 19 ರಂದು ಅಂಗಡಿಮಜಲು – ಮಾಡದಲ್ಲಿ ಭಕ್ತಿ , ಸಂಭ್ರಮದಿಂದ ನಡೆಯಿತು.
ಮಾ.12 ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಮಾ.18 ರಂದು ಪೂರ್ವಾಹ್ನ ಸ್ಥಳ ಶುದ್ಧಿ, ತಂಬಿಲ ಸೇವೆ , ಸಂಜೆ ಅಂಗಡಿಮಜಲು ಮಾಳ್ಯದಿಂದ ಭಂಡಾರ ತೆಗೆಯಲಾಯಿತು, ರಾತ್ರಿ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಿತು.
ಮಾ.19 ರಂದು ಪೂರ್ವಾಹ್ನ ಮೆಗ್ಯ ನೇಮ ನಡಾವಳಿ ನಡೆಯಿತು, ನಂತರ ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ ನಡೆಯಿತು. ನಂತರ ನಾಯರ್ ದೈವದ ನೇಮ, ಮಧ್ಯಾಹ್ನ ಪುರುಷ ದೈವದ ಮತ್ತು ಉಪದೈವಗಳ ನೇಮೋತ್ಸವ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಗಂಟೆ 5.೦೦ಕ್ಕೆ ದೈವದ ಭಂಡಾರವನ್ನು ಅಂಗಡಿಮಜಲು ಮಾಳ್ಯಕ್ಕೆ ಸಾಗಿಸಲಾಗುವುದು.
ಪ್ರತಿಭಾನ್ವಿತರಿಗೆ ಸನ್ಮಾನ
ಮಾ.18 ರಂದು ಸಂಜೆ ಡಾ. ಸಂದೀಪ್ ಬಿರ್ಮುಕಜೆ, ಕುಮಾರಿ ದ್ವಿತಿ ಎಸ್ ಸಾರಕೆರೆಯವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಳಿಕ ವಿಠಲ ನಾಯಕ್ ಮತ್ತು ಬಳಗದವರಿಂದ ಸಾಂಸ್ಕೃತಿಕ ರಸಸಂಜೆ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಎಡಮಲೆ, ಮತ್ತು ಸದಸ್ಯರು,ನಾಲ್ಕುಮನೆ ಆಡಳ್ತೆದಾರರಾದ ಕುಳ್ಳಂಪಾಡಿ ಎಲ್ಯಣ್ಣ ಗೌಡ,ಎಡಮಲೆ ಗುರುಪ್ರಸಾದ್, ಕೀಲಾಡಿ ರಾಮಚಂದ್ರ ಗೌಡ,ಮಿತ್ತಮೂಲೆ ದಾಮೋದರ ಗೌಡ,ಆಡಳ್ತೆದಾರರಾದ ಆರಿಕಲ್ಲು ಗಿರಿಧರ ಗೌಡ,ಬಿರ್ಮುಕಜೆ ಗಂಗಾಧರ ಗೌಡ,ಕುಳ್ಳಂಪಾಡಿ ನೀಲಪ್ಪ ಗೌಡ, ಮಿತ್ತಮೂಲೆ ಮೋನಪ್ಪ ಗೌಡ,ಕತ್ಲಡ್ಕ ಜಯರಾಮ ಗೌಡ, ಸಾರಕರೆ ರುಕ್ಮಯ್ಯ ಪೂಜಾರಿ,ಶಾಂತಿಮೂಲೆ ಪುರಂದರ ನಾಯ್ಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.