ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ

0

ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವದ ಅಂಗವಾಗಿ ಇಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ, ರುಧಿರ ಚಾಮುಂಡಿ ದೈವದ ನೇಮೋತ್ಸವ ಹಾಗೂ ನಾಳೆ ದುಗ್ಗಲಾಯ ದೈವದ ನೇಮೋತ್ಸವ ನಡೆಯಲಿದೆ.

ಇಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ನಾಗ ದೇವರಿಗೆ ,ದೈವಗಳಿಗೆ ತಂಬಿಲ ನಡೆಯಿತು. ಮಾ.21 ರಂದು ಬೆಳಿಗ್ಗೆ ದೈವಸ್ಥಾನದ ಆಡಳಿತಕ್ಕೆ ಒಳಪಟ್ಟ ದುಗ್ಗಲಡ್ಕ ಕೆ.ಎಫ್.ಡಿ.ಸಿ.ಅರಣ್ಯದೊಳಗಿರುವ ಗುಳಿಗನ ಕಟ್ಟೆಯಲ್ಲಿ ಗುಳಿಗ ದೈವದ ನೇಮ ನಡೆಯಲಿದೆ.