ನೆಹರು ಯುವ ಕೇಂದ್ರ ಮತ್ತು ಯುವ ಕಾರ್ಯ ಸಚಿವಾಲಯ ಮತ್ತು ಅಂಬಿಕಾ ಮಹಿಳಾ ಮಂಡಲ. ರಿ. ಅರಂಬೂರು ಇವುಗಳ ಜಂಟಿ ಆಶ್ರಯದಲ್ಲಿ ಅರಂಬೂರಿನ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವು ಮಹಿಳಾ ಮಂಡಲದ ಅಧ್ಯಕ್ಷೆ, ಅಮಿತಾ ರೈ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮದುಮತಿ ಬೊಳ್ಳೂರುರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಮಹಿಳಾ ಒಕ್ಕೂಟದ ಕೋಶಾಧಿಕಾರಿ ಚಂದ್ರಾಕ್ಷಿ. ಜೆ. ರೈ ಯವರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು. ಮಹಿಳಾ ಮಂಡಲಕ್ಕೆ ಅನೇಕ ಅನುದಾನಗಳನ್ನು ತರಿಸಿ ಮಹಿಳಾ ಮಂಡಲದ ಶ್ರೇಯೋಭಿವೃದ್ಧಿಗೆ ಸಹಕರಿಸಿರುವ ಶ್ರೀಮತಿ ಚಂದ್ರಾಕ್ಷಿ. ಜೆ. ರೈ ಯವರನ್ನು, ಹಾಗೂ ಸ್ವ ಸಹಾಯ ಸಂಘಗಳನ್ನು ರಚಿಸಿ, ಮಹಿಳೆಯರನ್ನು ಒಗ್ಗೂಡಿಸಿಕೊಂಡು ಮಹಿಳಾ ಮಂಡಲವನ್ನು ಮುನ್ನಡೆಸಿಕೊಂಡು ಬಂದಿರುವ ಶ್ರೀಮತಿ ಹಾರಾವತಿ. ಕೆ. ಸಿ. ಯವರನ್ನು ಈ ಸಂದರ್ಭ ದಲ್ಲಿ ಶಾಲು ಹೊ ಹೊದಿಸಿ, ಫಲ, ಪುಷ್ಪವ ನ್ನಿತ್ತು ಸನ್ಮಾನಿಸಲಾಯಿತು. ಶ್ರೀಮತಿ ವೇದಾವತಿ ಮತ್ತು ಶ್ರೀಮತಿ ಉಷಾ ಚಂದ್ರ ಶೇಖರ್ ರವರು, ಸನ್ಮಾನಿತರ ಪರಿಚಯ ನೀಡಿದರು. ಖ್ಯಾತ ವೈದ್ಯರಾದ ಶ್ರೀಮತಿ ಸಾಯಿಗೀತಾ ಜ್ಞಾನೇಶ್ ರವರು ಮಹಿಳೆಯರಿಗೆ ಬಾದಿಸುವ ಸ್ತನ ಕ್ಯಾನ್ಸರ್, ಗರ್ಭ ಕೋಶದ ಕ್ಯಾನ್ಸರ್, ಮೊದಲಾದ ರೋಗಗಳ ಬಗ್ಗೆ ಸವಿವಿವರವಾಗಿ ಮಾಹಿತಿ ನೀಡಿದರು. ಜಿಲ್ಲಾ ಮಟ್ಟದ ಕ್ರೀಡಾ ಕೂಟ ದಲ್ಲಿ ಭಾಗವಹಿಸಿ ವಿಜಯೀ ಯಾದ ಕ್ರೀಡಾ ಪಟುಗಳಿಗೆ ಮಹಿಳಾ ಒಕ್ಕೂಟದ ಅಧ್ಯಕ್ಷರು ಹಾಗೂ ಕೋಶಾಧಿಕಾರಿಯವರು ಪದಕಗಳನ್ನು ನೀಡಿದರು.ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಯಲ್ಲಿ ತಮಗೆ ದೊರೆತ ಶೀಲ್ಡ್ ನ್ನು ಕ್ರೀಡಾ ಪಟುಗಳು ಮಹಿಳಾ ಮಂಡಲಕ್ಕೆ ನೀಡಿದರು. ಈ
ಕಾರ್ಯಕ್ರಮದಲ್ಲಿ ಶ್ರೀಮತಿ ಧನಲಕ್ಷ್ಮೀ ಆಳ್ವ ಮತ್ತು ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಕವಿತಾ ಸ್ವಾಗತಿಸಿ, ಶ್ರೀಮತಿ ಪುಷ್ಪಾವತಿ ವಂದಿಸಿದರು. ಶ್ರೀಮತಿ ಹಾರಾವತಿ ಯವರು ಉಪಹಾರ ದ ವ್ಯವಸ್ಥೆ ಮಾಡಿದ್ದರು. ಶ್ರೀಮತಿ ಚಂದ್ರಾವತಿ ನಿರೂಪಿಸಿದರು.