ಮಾ.21 ಈ ಭಾಗದಲ್ಲಿ ಕರೆಂಟ್ ಇಲ್ಲ

0

110ಕೆ.ವಿ. ನೆಟ್ಟಮುಡೂರು-ಕರಾಯ ಮತ್ತು 110ಕೆ.ವಿ. ನೆಟ್ಟಮುಡೂರು- ಮಾಡಾವು ವಿದ್ಯುತ್ ಮಾರ್ಗದ ಗೋಪುರ ಸಂಖ್ಯೆ : 27 ರಲ್ಲಿ ತುರ್ತಾಗಿ ದುರ್ಬಲ ಜಂಪರ್ ಬದಲಾವಣೆ, ತುರ್ತು ಮಾರ್ಗ ನಿರ್ವಹಣೆ ಮಾಡುವ ಸಲುವಾಗಿ ದಿನಾಂಕ: 21.03.2024(ಗುರುವಾರ )ರ ಅಪರಾಹ್ನ 02:00 ರಿಂದ ಅಪರಾಹ್ನ 4:00 ಗಂಟೆಯವರೆಗೆ 110ಕೆ.ವಿ. ನೆಟ್ಟಮುಡೂರು-ಕರಾಯ ಮತ್ತು 110ಕೆ.ವಿ. ನೆಟ್ಟಮುಡೂರು ಮಾಡಾವು ವಿದ್ಯುತ್ ಮಾರ್ಗಗಳ ವಿದ್ಯುತ್‌ ನಿಲುಗಡೆ ಮಾಡಲಾಗುವುದು.

ಆದ್ದರಿಂದ 110/33/11ಕೆವಿ ಮಾಡಾವು 33/11ಕೆವಿ ಸುಬ್ರಹ್ಮಣ್ಯ ಗುತ್ತಿಗಾರು ಬೆಳ್ಳಾರೆ ಕಾವು ಮತ್ತು ಸುಳ್ಳ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಹಾಗೂ 110/33/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಉಪ್ಪಿನಂಗಡಿ ಟೌನ್ ಮತ್ತು ಕಮ್ಮರ ಮಾರ್ಗ ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ