ಕೋವಿ ಡೆಪಾಸಿಟ್ ನಿಂದ ವಿನಾಯಿತಿ : ತಾಲೂಕು ಕಚೇರಿಯಲ್ಲೇ ಅರ್ಜಿ ಸ್ವೀಕರಿಸಲಿ – ಜೆಡಿಎಸ್ ಒತ್ತಾಯ

0

ಲೋಕಸಭೆ ಚುನಾವಣೆಯ ಪ್ರಯುಕ್ತ ರೈತರು ತಮ್ಮ ಕೋವಿಯನ್ನು ಠೇವಣಿ ಇಡಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಕಾಡು ಪ್ರಾಣಿಗಳ ಹಾವಳಿ ದಿನೇ ದಿನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆ ರಕ್ಷಿಸುವುದೇ ಸವಾಲಾಗಿದೆ. ಸರಕಾರಿ ಅಧಿಕಾರಿಗಳು ರೈತ ವಿರೋಧಿ ಆಗದೆ ರೈತ ಪರವಾಗಿರಬೇಕು. ಹಾಗೆ ಎಲ್ಲಾ ರೈತರು ಠೇವಣಿ ಇಡುವುದನ್ನು ಬಿಟ್ಟು ಕ್ರಿಮಿನಲ್ ಪ್ರಕರಣ ಎದುರಿಸುತ್ತಾರೋ ಅವರಿಗೆ ಈ ಕಾನೂನು ಅನ್ವಯವಾಗಲಿ. ಹಾಗೆಯೇ ಜಿಲ್ಲಾಧಿಕಾರಿಗಳು ರೈತರ ವಿನಾಯತಿ ಅರ್ಜಿಯನ್ನು ಸುಳ್ಯ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲು ಆದೇಶ ಮಾಡಬೇಕೆಂದು ತಾಲೂಕು ಜನತಾದಳದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿರುತ್ತಾರೆ.