ಮಾರ್ಚ್ 19 ರಿಂದ 24 ರವರೆಗೆ ಜಾರ್ಖಂಡ್ ನ ಜೆಮ್ಸೆಧ್‌ಪುರ ಜೆ.ಆರ್.ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ತಂಡಕ್ಕೆ 2 ಚಿನ್ನ,1 ಬೆಳ್ಳಿ , 9 ಕಂಚು ಪದಕ ಲಭಿಸಿದ್ದು, ತಂಡಕ್ಕೆ ಸುಳ್ಯ ಮೂಲದ ರಾಹುಲ್ ಜಿ.ದಾಸ್ ಕೋಚ್ ಆಗಿದ್ದರು.
ರಾಹುಲ್ ಜಿ.ದಾಸ್ ಅವರನ್ನು ಟೀಮ್ ಕೋಚ್ ಆಗಿ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಮಾಜಿ ವಿಶ್ವ ನಂ.1 ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್ ಅವರ ಉಲ್ಲೇಖದೊಂದಿಗೆ ತಂಡವನ್ನು ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಮಾರ್ಗದರ್ಶನ ಮಾಡಲು ನೇಮಕ ಮಾಡಿತ್ತು.
ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಸದಸ್ಯ ರಾಗಿರುವ ಇವರು, ಸುಳ್ಯದ ಎಂ.ಎನ್ಸ್ ಟೆಕ್ಸ್ಟ್ ಟೈಲ್ಸ್ ಮತ್ತು ಟೈಲರ್ಸ್ ಮಾಲಕ ಗೋಕುಲದಾಸ್ ರವರ ಪುತ್ರ.
ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯ ಶ್ರೀ ಅಕ್ಷಯ್ ಕೆ ಸಿ, ರಿಜ್ವಾನ್ ಅಹ್ಮದ್ ಜನತಾ ಇವರ ಮಾರ್ಗದರ್ಶನದಲ್ಲಿ,ಪ್ರಸ್ತುತ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿ (YPBA) ಬೆಂಗಳೂರಿನಲ್ಲಿ ಕಳೆದ 8 ವರ್ಷಗಳಿಂದ ಭಾರತದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಪೂರ್ಣ ಸಮಯದ ಬ್ಯಾಡ್ಮಿಂಟನ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಲೆವೆಲ್ 1 ಪ್ರಮಾಣೀಕೃತ ತರಬೇತುದಾರರಾಗಿದ್ದಾರೆ.