ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ ಉತ್ಸವವು ಮಾ.27 ಮತ್ತು 28ರಂದು ಜರುಗಿತು.
ಮಾ.27ರಂದು ಬೆಳಿಗ್ಗೆ ರಕ್ತೇಶ್ವರಿ, ನಾಗ ಮತ್ತು ಗುಳಿಗ ದೈವದ ತಂಬಿಲ ನಡೆಯಿತು.
ರಾತ್ರಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆದು, ಮೇಲೇರಿಗೆ ಅಗ್ನಿಸ್ಪರ್ಶ, ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು. ಬಳಿಕ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳ್ಚಾಟ – ವಿಷ್ಣುಲೀಲೆ ನಡೆಯಿತು.
ಮಾ.28ರಂದು ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಮಾರಿಕಳ, ಪ್ರಸಾದ ವಿತರಣೆ ಜರುಗಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೀತಾರಾಮ ಗೌಡ ಬುಡ್ಲೆಗುತ್ತು, ಪ್ರಧಾನ ಕಾರ್ಯದರ್ಶಿ ಎನ್.ಜಿ. ಚಂದ್ರಶೇಖರ ನರಿಯೂರು, ಮುತ್ತಪ್ಪ ಗೌಡ ಅಡ್ಕಾರು ಸೇರಿದಂತೆ ಅಡ್ಕಾರು ಕುಟುಂಬಸ್ಥರು, ತೀಯ ಸಮಾಜದ ಬಂಧುಗಳು ಹಾಗೂ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.