ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ವಿನಾಯಿತಿಗೆ ಸಲ್ಲಿಸಿದ್ದ 300 ಅರ್ಜಿ ತಿರಸ್ಕೃತ
ತಾಲೂಕಿನಲ್ಲಿ 7 ಮಂದಿಗೆ ವಿನಾಯಿತಿ
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಂದೂಕು ದಾರರು ತಮ್ಮಲ್ಲಿರುವ ಬಂದೂಕನ್ನು ಡೆಪಾಸಿಟ್ ಮಾಡಲು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದ, ತಾಲೂಕಿನಿಂದ ೩೦೭ ಮಂದಿ ರೈತರು ವಿನಾಯಿತಿಕೋರಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅರ್ಜಿಗಳ ವಿಚಾರಣೆ ನಡೆದು ೩೦೦ ಅರ್ಜಿಗಳು ತಿರಸ್ಕೃತಗೊಂಡಿದ್ದು, ೭ಮಂದಿಗೆ ವಿನಾಯಿತಿ ಸಿಕ್ಕಿದೆ. ಆದ್ದರಿಂದ ಬಂದೂಕುದಾರರು ಮಾ. ೩೧ರೊಳಗೆ ತಮಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ತಮ್ಮ ಬಂದೂಕನ್ನು ಡೆಪಾಸಿಟ್ ಇಡುವಂತೆ ತಿಳಿಸಲಾಗಿದೆ. ಸುಬ್ರಹ್ಮಣ್ಯ ಜೋಶಿ ಸುಳ್ಯ, ಮಾಜಿ ಸಚಿವ ಎಸ್.ಅಂಗಾರ, ಕಾರ್ಯನಿರ್ವಹಣಾಧಿಕಾರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಳ್ಯ ತಾಲೂಕು, ಕೇಶವ ಗೌಡ ದೇವಚಳ್ಳ ಇವರಿಗೆ ಆತ್ಮರಕ್ಷಣೆಯ ಉದ್ಧೇಶದಿಂದ ಹಾಗೂ ಶೃತಿ ದೇವಚಳ್ಳ, ಪ್ರಶಾಂತ್ ವಿ.ಟಿ. ದೇವಚಳ್ಳ, ವಿ.ವಿ. ವಿಕ್ರಂ ಅಜ್ಜಾವರ ಇವರಿಗೆ ಕೃಷಿ ರಕ್ಷಣೆಯ ಉದ್ಧೇಶದಿಂದವಿನಾಯಿತಿ ನೀಡಲಾಗಿದೆ.