ಸುಳ್ಯದ ಓಡಬಾಯಿ ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ

0

ಮಹಿಳೆಯ ಕಾಲು ಜಖಂ : ಆಸ್ಪತ್ರೆಗೆ ದಾಖಲು

ಸುಳ್ಯದ ಓಡಬಾಯಿ ಸಮೀಪ ಎರಡು ಬೈಕುಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಒಂದು ಬೈಕಿನ ಹಿಂಭಾಗದಲ್ಲಿ ಕುಳಿತಿದ್ದ ಮಹಿಳೆಯ ಕಾಲಿಗೆ ಗಂಭೀರ ಗಾಯವಾದ ಘಟನೆ ಇಂದು ಸಂಭವಿಸಿದೆ.

ಅಪಘಾತಕ್ಕೀಡಾದ ಎರಡು ಬೈಕುಗಳು ಸುಳ್ಯದಿಂದ ಪೈಚಾರಿನ ಕಡೆಗೆ ಸಾಗುತ್ತಿದ್ದು ಒಡಬಾಯಿ ಮಾಂಡವಿ ಶೋರೂಮ್ ಮುಂಭಾಗದಲ್ಲಿ ಎರಡು ಬೈಕುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಬಸಕ್ಕೆ ಒಂದು ಬೈಕಿನಲ್ಲಿ ಸಹಸವಾರರಾಗಿ ಕುಳಿತಿದ್ದ ಮಹಿಳೆಯ ಕಾಲಿಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಅಪಘಾತದಿಂದ ಕಾಲು ಮುರಿತಕ್ಕೊಳಗಾದ ಮಹಿಳೆ ಬೆಳ್ಳಾರೆಯವರಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.