ವಳಲಂಬೆ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ನೇಮೋತ್ಸವ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಮಾ.24 ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಮತ್ತು ಮಾ.25 ರಂದು ನೇಮೋತ್ಸವ ನಡೆಯಿತು.

ಮಾ.24 ರ ಬೆಳಗ್ಗೆ ಗಣಪತಿ ಹೋಮ ಮತ್ತು ಶತರುದ್ರಾಭಿಷೇಕ ಹಾಗೂ 39ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಅದೇ ದಿನ ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಿತು. ರಾತ್ರಿ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಇವರಿಂದ ಯಕ್ಷಗಾನ ಬಯಲಾಟ ‘ಕೋಟಿ-ಚೆನ್ನಯ’ ನಡೆಯಲಿದೆ.

ಮಾ. 25 ರಂದು ರಾಜ್ಯದೈವ ಮತ್ತು ಪುರುಷ ದೈವಗಳ ನೇಮೋತ್ಸವ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಕಡ್ತಲ್ ಕಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.