ಹೋಲಿ ಕ್ರಾಸ್ ಚರ್ಚ್ ಬೆಳ್ಳಾರೆಯಲ್ಲಿ ಪವಿತ್ರ ಗುರುವಾರ ಆಚರಣೆ

0

ಕ್ರೈಸ್ತ ಭಾಂಧವರು ಮಾ.28 ಪವಿತ್ರ ಗುರುವಾರ ಎಂಬ ದಿನವನ್ನು ಆಚರಿಸುತ್ತಾರೆ.ಈಸ್ಟರ್ ಹಬ್ಬದ 2 ದಿನದ ಮೊದಲು ಆಚರಿಸುವ ಆಚರಣೆಯಾಗಿದೆ.


ಪವಿತ್ರ ಶಿಲುಬೆಯ ಚರ್ಚ್ ಬೆಳ್ಳಾರೆ ಇಲ್ಲಿ ಪವಿತ್ರ ಗುರುವಾರ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಾಲ್ದಾಣ ಭಾಗವಹಿಸಿ ಬಲಿಪೂಜಾ ವಿಧಿ ವಿಧಾನವನ್ನು ಭಕ್ತಿ ಭಾವದಿಂದ ಅರ್ಪಿಸಿದರು.


ಯೇಸು ಸ್ವಾಮಿ 12 ಮಂದಿ ಶಿಷ್ಯಂದಿರ ಕಾಲುಗಳನ್ನು ತೊಳೆದು ಜಗತ್ತಿಗೆ ಸೇವಾ ಮನೋಭಾವವನ್ನು ಸಾರಿದರು. ಈ ಆಚರಣೆಯನ್ನು ಸಾವಿರಾರು ವರ್ಷಗಳಿಂದ ಆಚರಿಸಲಾಗುತ್ತಿದ್ದು ಇಂದಿಗೂ ಚಾಲ್ತಿಯಲ್ಲಿದೆ ಅದರ ಸಂಕೇತವಾಗಿ ಬಿಷಪರು ಚರ್ಚಿನ 12 ಮಂದಿ ಚರ್ಚ್ ಬಾಂಧವರ ಕಾಲುಗಳನ್ನು ತೊಳೆದು ಯೇಸುವಿನ ಘಟನಾವಳಿಯನ್ನು ಜನರಿಗೆ ತಿಳಿಸುವುದರ ಮೂಲಕ ಸೇವೆಯ ಮನೋಭಾವನೆಯನ್ನು ಅರ್ಥೈಸಿದರು ಹಾಗೂ ಯೇಸುವಿನ ಕೊನೆಯ ದಿನವನ್ನು ಮೆಲುಕು ಹಾಕುವುದರ ಮೂಲಕ ಶಾಂತಿ, ಪ್ರೀತಿ,ಸೇವೆ, ತ್ಯಾಗದ ವಿಚಾರಧಾರೆಯ ಪ್ರವಚನವನ್ನು ನೀಡಿದರು.

ಬೆಳ್ಳಾರೆ ಚರ್ಚಿನ ಧರ್ಮ ಗುರುಗಳಾದ ಅಂಟೋನಿ ಪ್ರಕಾಶ್ ಮೊಂತೆರೋ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು ಬಲಿ ಪೂಜೆಯ ಜೊತೆಗೆ ಆರಾಧನೆಯನ್ನು ಗೈಯಲಾಯಿತು ಎಲ್ಲಾ ಪೂಜಾ ವಿಧಿ ವಿಧಾನದ ನಂತರ ಬಿಷಪರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಬಿಷಪರು ಚರ್ಚಿನ ಧರ್ಮ ಗುರುಗಳು ಚರ್ಚ್ ಬಾಂಧವರ ಬಗ್ಗೆ ಹಿತನುಡಿಯನ್ನು ನುಡಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಪವಿತ್ರ ಗುರುವಾರದ ದಿನದಂದು ಬಿಷಪರು ಅರ್ಪಿಸಿದ ಪೂಜಾ ಬಲಿ ವಿಧಿ ವಿಧಾನದಲ್ಲಿ ಚರ್ಚಿನ ಧರ್ಮ ಗುರುಗಳು, ಕಾರ್ಯದರ್ಶಿಗಳು, ಗುರಿಕಾರರು, ಪ್ರತಿನಿಧಿಗಳು, ಚರ್ಚ್ ಬಾಂಧವರು, ಭಕ್ತಿ ಭಾವದಿಂದ ಮಿಂದೆದ್ದರು.