ಸಂಪಾಜೆ: ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಹಿನ್ನೆಲೆ

0

ಪಂಜುರ್ಲಿ – ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಪ್ರಯುಕ್ತ ಪಂಜುರ್ಲಿ ಹಾಗೂ ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮವು ಮಾ.30ರಂದು ಜರುಗಿತು.

ಸಂಪಾಜೆಯ ಕಿಲಾರಿನಲ್ಲಿರುವ ಶ್ರೀ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ದೈವಗಳಿಗೆ ಸಮ್ಮಾನ ಸಮರ್ಪಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ದೈವದ ಪೂಜಾರಿ ನಾರಾಯಣ ಬಾಲೆಂಬಿ, ದೈವದ ಪೂಜಾರಿಗಳಾದ ರವೀಂದ್ರ, ರಾಧಾಕೃಷ್ಣ, ಭರತ್ ಪೂಜಾರಿ, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಗದೀಶ್ ರೈ ಸಂಪಾಜೆ, ಕಾರ್ಯದರ್ಶಿ ಮಂಜುನಾಥ, ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ, ಮಾಜಿ ಅಧ್ಯಕ್ಷ ಶ್ರೀಧರ ಮಾದೆಪಾಲು, ಉಪಾಧ್ಯಕ್ಷರುಗಳಾದ ನಾಗೇಶ್ ಪೇರಾಲು, ಸುರೇಶ್ ಕದಿಕಡ್ಕ, ಚಂದ್ರಶೇಖರ ಮೇಲಾಂಟ, ವಿ.ವಿ. ಬಾಲನ್ ಸಂಪಾಜೆ, ಅಪ್ಪಯ್ಯ ಬೆಳ್ಚಪ್ಪಾಡ ಕಲ್ಲುಗುಂಡಿ ಸೇರಿದಂತೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.