ಚಂದನಾ ಕೆ.ಸಿ. ಅವರಿಗೆ ಬಿ.ಫಾರ್ಮಾದಲ್ಲಿ ರ‍್ಯಾಂಕ್

0


2023-24ನೇ ಸಾಲಿನ ರಾಜೀವಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾನಿಲಯ ನಡೆಸಿದ ಬಿ.ಫಾರ್ಮಾ ಅಂತಿಮ ಪರೀಕ್ಷೆಯಲ್ಲಿ ಸುಳ್ಯದ ಕು.ಚಂದನಾ ಕೆ.ಸಿ. ಅವರು 6ನೇ ರ‍್ಯಾಂಕ್ ಪಡೆದಿದ್ದಾರೆ. ಈ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಬಿ.ಫಾರ್ಮಾ ಪದವಿ ಪಡೆದಿದ್ದಾರೆ. ಚಂದನಾ ಅವರು ಸುಳ್ಯ ಜಯನಗರದ ಚಂದ್ರಶೇಖರ್ (ಬೀಯೆಫ್) ಹಾಗೂ ಜಯಪ್ರಭಾ ಅವರ ಪುತ್ರಿ. ಮಂಗಳೂರಿನ ಪ್ರತಿಷ್ಠಿತ ಶ್ರೀ ದೇವಿ ಕಾಲೇಜ್ ಆಫ್ ಫಾರ್ಮಸಿಯ ವಿದ್ಯಾರ್ಥಿನಿ. ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಕೆವಿಜಿ ಅಮರಜ್ಯೋತಿ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.