ಶಾಂತಿನಗರದಲ್ಲಿ ಮಹಿಳಾ ದಿನಾಚರಣೆ

0

ದೀಪಾಂಜಲಿ ಮಹಿಳಾ ಮಂಡಲ( ರಿ )ಶಾಂತಿನಗರ ಇದರ ವತಿಯಿಂದ ವರ್ಷಂಪ್ರತಿ ನಡೆಸುತ್ತಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅಧ್ಯಕ್ಷರ ಮನೆಯ ವಠಾರದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷ ಶ್ರೀಮತಿ ಲಲಿತಾ ಎಂ.ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ದೇವಕಿ ಬಿ.ಸೋಣಂಗೇರಿ. ಇವರು ಆರೋಗ್ಯ ಇಲಾಖಾ ಶುಶ್ರೂತ ಅಧೀಕ್ಷಕರಾಗಿ ವೃತ್ತಿಯಿಂದ ನಿವೃತ್ತಗೊಂಡಿರುತ್ತಾರೆ. ಇವರು ಪ್ರಸ್ತುತ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಇವರು ಮಹಿಳಾ ದಿನಾಚರಣೆಯ ಮಹತ್ವವನ್ನು ಸವಿ ವಿವರವಾಗಿ ತಿಳಿಸಿಕೊಟ್ಟರು.

ವೇದಿಕೆಯಲ್ಲಿ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ ಉಪಸ್ಥಿತರಿದ್ದು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಶ್ರೀಮತಿ ಖಜಾಂಜಿ ಯಶೋದ ಶುಭ ಹಾರೈಸಿದರು .ಶ್ರೀಮತಿ ಶೋಭಾಗೋಪಾಲ್ ಪ್ರಾರ್ಥನೆ ಮಾಡಿದರು.ಅಧ್ಯಕ್ಷ ಲಲಿತಾ.ಯಂ ಸ್ವಾಗತಿಸಿ , ಕಾರ್ಯದರ್ಶಿ ಬಿಂದು ಚಂದ್ರ ನ್ ವಂದನಾರ್ಪಣೆ ಮಾಡಿದರು .ಸೇರಿದಂತಹ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪರ್ಧೆಯನ್ನು ನಡೆಸಿ ಮಲ್ಲಿಗೆ ಹೂವಿನ ಗಿಡಗಳನ್ನು ವಿಜೇತರಿಗೆ ನೀಡಲಾಯಿತು. ಕಾರ್ಯಕ್ರಮದ ಕೊನೆಗೆ ಅಂಗನವಾಡಿ ಕಾರ್ಯಕರ್ತೆ ಓಟು ಹಾಕುವ ಬಗ್ಗೆ ಪ್ರತಿಜ್ಞೆ ನಡೆಸಿಕೊಟ್ಟರು.