ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲದ ನೂತನ ಪದಾಧಿಕಾರಿಗಳ ಆಯ್ಕೆ

0

ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲದ ಮಹಾಸಭೆ ಮಾರ್ಚ್ ೨೯ ರ೦ದು ಮಹಿಳಾ ಮ೦ಡಲದ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಮೇದಪ್ಪ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸ೦ದರ್ಭದಲ್ಲಿ ೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಲೀಲಾವತಿ ಮೇದಪ್ಪ, ಅಧ್ಯಕ್ಷರಾಗಿ ಕಲಾವತಿ ತೀರ್ಥರಾಮ, ಕಾರ್ಯದರ್ಶಿಯಾಗಿ ಜ್ಯೋತಿ ಹರೀಶ್, ಕೋಶಾಧಿಕಾರಿಯಾಗಿ ವನಿತಾ ಸ೦ತೋಷ್, ಉಪಾಧ್ಯಕ್ಷರಾಗಿ ಶಾರಾದ ಜಯರಾಮ, ಜೊತೆ ಕಾರ್ಯದರ್ಶಿಯಾಗಿ ರೋಹಿಣಿ ಕಿಶೋರ್, ಕ್ರೀಡಾ ಕಾರ್ಯದರ್ಶಿಯಾಗಿ ಲತಾರಾಧಕೃಷ್ಣ ಆಯ್ಕೆಯಾದರು. ಶ್ರೀಮತಿ ಹೇಮವೇಣುಗೋಪಾಲ್ ಸ್ವಾಗತಿಸಿ, ಶ್ರೀಮತಿ ಶ್ರುತಿ ಮ೦ಜುನಾಥ್ ವ೦ದಿಸಿದರು.