ಜನವರಿ ತಿಂಗಳಿನಲ್ಲಿ ನಡೆದ ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯ ಜ್ಞಾನದೀಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 17 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಸುಳ್ಯ ತಾಲೂಕು ತೊಡಿಕಾನದ ದೊಡ್ಡಕುಮೇರಿ ಸೋಮಯ್ಯ ಮತ್ತು ಬೇಬಿ ದಂಪತಿಯ ಪುತ್ರಿ ತೊಡಿಕಾನ ಸ.ಉ.ಹಿ.ಪ್ರಾ ಶಾಲೆಯ ವಿದ್ಯಾರ್ಥಿನಿ ಭವ್ಯಶ್ರೀ, ಸುಳ್ಯ ತಾಲೂಕು ಕನಕಮಜಲು ಗ್ರಾಮದ ದೇರ್ಕಜೆ ವೆಂಕಪ್ಪ ನಾಯ್ಕ ಮತ್ತು ಮೋಹಿನಿ ದಂಪತಿಯ ಪುತ್ರ ಮೊಗೇರು ಸ. ಕಿ. ಪ್ರಾ ಶಾಲೆಯ ವಿದ್ಯಾರ್ಥಿ ಡಿ. ಕುಶನ್, ಗುತ್ತಿಗಾರು ಗ್ರಾಮದ ಬಲ್ಬೇರಿ ಬೆಳ್ಯಪ್ಪ ಮತ್ತು ಮಾಲತಿ ದಂಪತಿಯ ಪುತ್ರಿ ಬಳ್ಪ ಸ.ಉ.ಹಿ.ಪ್ರಾ ಶಾಲೆಯ ವಿದ್ಯಾರ್ಥಿನಿ ಧನ್ವಿ ಬಿ., ಬಳ್ಪ ಗ್ರಾಮದ ಎಣ್ಣೆಮಜಲು ಕುಸುಮಾಧರ ಮತ್ತು ಕುಮುದ ದಂಪತಿಯ ಪುತ್ರ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಹವ್ಯಾಸ್ ಎ ಕೆ, ಅಲೆಟ್ಟಿ ಗ್ರಾಮದ ನರಂದಗುಳಿ ವಿನೋದ್ ಮತ್ತು ಕವಿತಾ ದಂಪತಿಯ ಪುತ್ರಿ ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಾಳವಿಕ ವಿ, ಕಡಬ ತಾಲೂಕು ಏನೇಕಲ್ಲು ಗ್ರಾಮದ ಪುಂಡಿಗದ್ದೆ ದಿವಾಕರ ಮತ್ತು ದಮಯಂತಿ ದಂಪತಿಯ ಪುತ್ರ ಏನೇಕಲ್ಲು ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿ ನಿಶ್ಚಲ್ ಪಿ. ಡಿ, ಅಮರಪಡನೂರು ಗ್ರಾಮದ ಪಾಡಾಜೆ ಜನಾರ್ಧನ ಮತ್ತು ಜಯಂತಿ ದಂಪತಿಯ ಪುತ್ರಿ ಕುಕ್ಕುಜಡ್ಕದ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಕ್ಷಾ ಪಿ. ಜೆ, ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಸಣಂಗಳ ನಡುಮನೆ ಪ್ರಸಾದ್ ಕುಮಾರ್ ಎಸ್ ಮತ್ತು ಶಿಲ್ಪಾ ಎ. ಆರ್ ದಂಪತಿಯ ಪುತ್ರ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಂಜಿತ್ ರೈ ಸಣಂಗಳ, ಪಾಲ್ತಾಡಿ ಗ್ರಾಮದ ಕಳಾಯಿ ಮೋನಪ್ಪ ಡಿ ಕೆ ಮತ್ತು ಸೇಸಮ್ಮ ದಂಪತಿಯ ಪುತ್ರ ಮಾಲೆತ್ತೋಡಿ ಸ. ಕಿ. ಪ್ರಾ. ಶಾಲೆಯ ವಿದ್ಯಾರ್ಥಿ ಸೃಜನ್, ಮಡಪ್ಪಾಡಿ ಗ್ರಾಮದ ಗೋಳಿಯಡ್ಕ ಮೋಹನ ಜಿ. ಎ ಮತ್ತು ವಿಮಲ ದಂಪತಿಯ ಪುತ್ರ ಮಡಪ್ಪಾಡಿ ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿ ತರುಣ್ ಮೋಹನ್ ಜಿ, ಉಬರಡ್ಕ ಗ್ರಾಮದ ಬೆಳ್ಳಿಪ್ಪಾಡಿ ವಿನಯಕುಮಾರ್ ಬಿ. ಎಸ್ ಮತ್ತು ಪ್ರಮಿತಾ ಐ ಎಂ ದಂಪತಿಯ ಪುತ್ರಿ ಸುಳ್ಯದ ಕೆ.ವಿ.ಜಿ ಐಪಿಎಸ್ ನ ವಿದ್ಯಾರ್ಥಿನಿ ವೈಷವಿ ಬಿ, ಐವರ್ನಾಡು ಗ್ರಾಮದ ಕೋಡ್ತಿಲು ಚಂದ್ರಶೇಖರ ಕೆ ಮತ್ತು ಮಲ್ಲಿಕಾ ದಂಪತಿಯ ಪುತ್ರಿ ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವೇನಿಕ, ಪುತ್ತೂರು ತಾಲೂಕು ಕೈಮನಾ ಗ್ರಾಮದ ಮರಕ್ಕಡ ಸಂತೋಷ್ ಕುಮಾರ್ ಎನ್ ಮತ್ತು ಯಶೋಧ ದಂಪತಿಯ ಪುತ್ರ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿ ವಿಶ್ರುತ್ ಎಂ ಎಸ್, ಐವರ್ನಾಡು ಗ್ರಾಮದ ಮಡ್ತಿಲ ದೊಡ್ಡಮನೆ ಶೇಖರ ಸಿ ಆರ್ ಮತ್ತು ಶ್ವೇತಾ ಡಿ ದಂಪತಿಯ ಪುತ್ರ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಯಶ್ವಿನ್ ಸಿ. ಎಸ್, ಬಂಟ್ವಾಳ ತಾಲೂಕು ಕುಳ ಗ್ರಾಮದ ದೊಡ್ಡಮಜಲು ನವೀನ ಡಿ ಮತ್ತು ಕುಮುದಾಮನಿ ಪಿ ವೈ ದಂಪತಿಯ ಪುತ್ರ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಅರ್ಜುನ್ ನವೀನ್, ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಪುಡಿಕೆಟ್ಟುರೆಯ ರವಿಚಂದ್ರ ಪಿ ಮತ್ತು ಚೇತನಾ ಕೆ ದಂಪತಿಯ ಪುತ್ರ ಕೊಕ್ಕಡ ಸೈoಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅದಿತ್ ಆರ್ ಪಿ, ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಕೆ. ಎಂ ಜಿತೇoದ್ರ ಮತ್ತು ಸುನೀತಾ ದಂಪತಿಯ ಪುತ್ರಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಎನ್ ಜೆ ಲಿತಿಕ್ಷಾ ನವೋದಯ ವಿದ್ಯಾಲಯಕ್ಕೆ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ. ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದವರು ಆರರಿಂದ ಹನ್ನೆರಡನೇ ತರಗತಿಯವರೆಗೆ ಕೇಂದ್ರೀಯ ಪಠ್ಯಕ್ರಮದಲ್ಲಿ ವಸತಿಯುತ ಉಚಿತ ಶಿಕ್ಷಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಜ್ಞಾನದೀಪದ 182 ವಿದ್ಯಾರ್ಥಿಗಳು ಆಯ್ಕೆ
ಪ್ರಸಕ್ತ ವರ್ಷ ಜ್ಞಾನದೀಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಒಟ್ಟು 17 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗುವ ಮೂಲಕ ಇದುವರೆಗೆ ಇಲ್ಲಿ ತರಬೇತಿ ಪಡೆದ ಒಟ್ಟು 182 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. 2024-25ನೇ ಸಾಲಿನಲ್ಲಿ ನವೋದಯ ಪ್ರವೇಶಕ್ಕೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ತರಬೇತಿಗೆ ದಾಖಲಾತಿ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.