ಬೇಂಗಮಲೆ – ಚೊಕ್ಕಾಡಿ ರಸ್ತೆ ಡಾಮರೀಕರಣ ಪ್ರಾರಂಭ

0

ಹಲವು ವರ್ಷಗಳ ಬೇಡಿಕೆ ಈಡೇರಿದ ಖುಷಿಯಲ್ಲಿ ಸಾರ್ವಜನಿಕರು

ಬೇಂಗಮಲೆ ಚೊಕ್ಕಾಡಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಡಾಮರೀಕರಣ ಕಾಮಗಾರಿ ಪ್ರಾರಂಭಗೊಂಡಿದೆ.

ಈ ರಸ್ತೆಯ ಅಭಿವೃದ್ಧಿಗೆ ಈ ಹಿಂದಿನ ಶಾಸಕರು ಹಾಗೂ ಸಚಿವರಾಗಿದ್ದ ಎಸ್.ಅಂಗಾರರವರು ಎರಡು ಕೋಟಿ ಅನುದಾನ ತರಿಸಿದ್ದರು. ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ರಸ್ತೆಯ ಸಮಸ್ಯೆಯ ಬಗ್ಗೆ ಮಾಧ್ಯಮಗಳಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿತ್ತು.
ಇಕ್ಕಟ್ಟಾದ ರಸ್ತೆ, ಧೂಳು ಗುಂಡಿಗಳಿಂದ ಕೊಡಿದ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು.
ಇದೀಗ ಅಗಲೀಕರಣಗೊಂಡ ರಸ್ತೆಗೆ ಡಾಮರೀಕರಣ ಕೆಲಸ ಪ್ರಾರಂಭಗೊಂಡಿದ್ದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.