ಸುಳ್ಯ ಜೂನಿಯರ್ ಕಾಲೇಜು ಬಳಿ ಒಳಚರಂಡಿ ಕಾಮಗಾರಿ

0

ಅವೈಜ್ಞಾನಿಕ ಕಾಮಗಾರಿ : ಸ್ಥಳೀಯರಿಂದ ಆರೋಪ

ಸುಳ್ಯ ಜೂನಿಯರ್ ಕಾಲೇಜ್ ಸಮೀಪ ನಾಯರ್ ಕಾಂಪ್ಲೆಕ್ಸ್ ಬಳಿ ಸುಳ್ಯ ನಗರ ಪಂಚಾಯತಿ ವತಿಯಿಂದ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಕಾಂಪ್ಲೆಕ್ಸ್ ಮುಂಭಾಗದಿಂದ ಸುಮಾರು ೫೬ ಮೀಟರ್ ಉದ್ದದ ಚರಂಡಿ ಕೆಲಸ ಕಾರ್ಯ ನಡೆಯುತ್ತಿದ್ದು ಈ ಚರಂಡಿಯ ಮೇಲ್ಭಾಗವು ರಸ್ತೆಯಿಂದ ತೀರಾ ಕೆಳಭಾಗದಲ್ಲಿದ್ದು ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಚರಂಡಿಗೆ ಜಾರುವ ಪರಿಸ್ಥಿತಿ ಬರಬಹುದು ಎಂಬ ಆತಂಕ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆದರೆ ಕೆಲಸ ನಿರ್ವಹಿಸುತ್ತಿದ್ದ ಮೇಸ್ತ್ರಿ ಸುದ್ದಿ ವರದಿಗಾರರೊಂದಿಗೆ ಮಾತನಾಡಿ, ನಾವು ಮೊದಲು ಚರಂಡಿಯನ್ನು ಎತ್ತರದಲ್ಲಿ ಮಾಡುತ್ತಿದ್ದೆವು. ಆದರೆ ಕಾಂಪ್ಲೆಕ್ಸ್ ಮಾಲಕರು ಅಡಿಯ ಭಾಗದಲ್ಲಿ ಕಲ್ಲುಗಳು ಹಾಸಿರುವುದರಿಂದ ಅದನ್ನು ತೆಗೆಯಬೇಕೆಂದು ಹೇಳಿದರು. ಅದನ್ನು ತೆರವುಗೊಳಿಸಿದಾಗ ಕೆಳಬಾಗದ ಮಣ್ಣು ಸಡಿಲ ಇದ್ದ ಕಾರಣ ನಾವು ಆಳವಾಗಿ ತೆಗೆಯುವ ಪರಿಸ್ಥಿತಿ ನಿರ್ಮಾಣವಾಯಿತು.ಆದರೆ ಇದು ಕೆಲವು ಭಾಗದಲ್ಲಿ ಮಾತ್ರ ಎತ್ತರ ತಗ್ಗು ಇದ್ದು ಗೇಟಿನ ಬಳಿ ಸ್ಲಾಬ್ ಕಲ್ಲುಗಳನ್ನು ಅಳವಡಿಸಿಕೊಡಲಾಗುವುದು.
ಉಳಿದ ಕಡೆಗೆ ಚರಂಡಿಯ ಎತ್ತರಕ್ಕೆ ರಸ್ತೆಯ ಮಣ್ಣನ್ನು ತೆಗೆಯುವ ಕಾರ್ಯ ಮಾಡುವುದಾಗಿ ಕಾಂಪ್ಲೆಕ್ಸ್ ನವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದಲೂ ಚರಂಡಿಗೆ ಸಂಪೂರ್ಣ ಸ್ಲಾಬ್ ಅಳವಡಿಸುವ ಕಾರ್ಯಗಳು ಆಗಬಹುದು ಎಂದು ಅವರು ಹೇಳಿದರು.