ಬಳ್ಪ ಕೇನ್ಯ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಎ. 5ರಂದು ಬಳ್ಪದ ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ ಅಕ್ಕೆನಿಯವರ ತೋಟದ ಮನೆಯಲ್ಲಿ ನಡೆಯಿತು.
ಕಾಂಗ್ರೆಸ್ ನಾಯಕ ಅಶೋಕ್ ನೆಕ್ರಾಜೆಯವರ ಉಸ್ತುವಾರಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ವಹಿಸಿರುವ ಎನ್. ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ದ.ಕ. ಲೋಕಸಭಾ ಅಭ್ಯರ್ಥಿ ಪದ್ಮರಾಜ್ ರನ್ನು ಗೆಲ್ಲಿಸುವ ಉದ್ದೇಶದಿಂದ ಕಾಂಗ್ರೆಸ್ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸುವುದು ಮತ್ತು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ತಲುಪದಿರುವ ಕುಟುಂಬಗಳಿಗೆ ಯೋಜನೆಗಳನ್ನು ಜೋಡಿಸುವ ಕಾರ್ಯವನ್ನು ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾತೆನ್ನಲಾಗಿದೆ.
ಸಭೆಯಲ್ಲಿ ಚಂದ್ರಕಾಂತ್ ಎಂ.ಎಂ, ಕೇನ್ಯ ರವೀಂದ್ರನಾಥ ಶೆಟ್ಟಿ, ಸಂತೋಷ್ ರೈ, ಗೋಪಾಲ್ ಎಣ್ಣೆಮಜಲು, ಚಂದ್ರಶೇಖರ ಅಕ್ಕೆನಿ, ಕುಳ ಪುಟ್ಟಣ್ಣ ಗೌಡ, ಅಚ್ಚುತ ಅಲ್ಕಬೆ, ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಭಾಸ್ಕರ ಕೊರಪ್ಪಣೆ, ಪ್ರಶಾಂತ್ ಪೊಟ್ಟುಕೆರೆ, ಪ್ರಶಾಂತ್ ಕಾರ್ಜ, ಮಹೇಶ್ ಸೂಂತಾರು, ಶಿವಪ್ರಸಾದ್ ಕೊಠಾರಿ, ಕಿರಣ್ ಕಲ್ಲೇರಿ, ಗಂಗಾಧರ, ಮಿಥುನ್ ರಾಜ್, ಪ್ರಶಾಂತ್ ಕೋಡಿಯಡ್ಕ, ಯಶೋಧರ ಗೆಜ್ಜೆ, ಪಕಾಶ್ ಕಾಯಂಬಾಡಿ, ವಿಕೇಶ್ ರೈ, ಯಶವಂತ್ ಚೆನ್ನಕಜೆ, ಶ್ರೀನಿವಾಸ ಪಲ್ಲತ್ತಡ್ಕ, ಸದಾಶಿವ ಎಣ್ಣೆಮಜಲು, ಶ್ರೀಮತಿ ಶೈಲಜಾ ಎಣ್ಣೆಮಜಲು, ಗಣೇಶ್ ಹೊಪ್ಪಾಳೆ,ಜಿ.ಟಿ. ಪ್ರಕಾಶ್ ಗೆಜ್ಜೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.