ಕನಕಮಜಲಿನ ಕುದ್ಕುಳಿ ತರವಾಡು ಮನೆಯಲ್ಲಿ ಧರ್ಮದೈವ, ಶ್ರೀ ವಿಷ್ಣುಮೂರ್ತಿ ಮತ್ತು ಸಪರಿವಾರ ದೈವಗಳ ನೇಮೋತ್ಸವ ಏ.4 ಮತ್ತು 5 ರಂದು ನಡೆಯಿತು.
ಏ. 4 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆದು ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಕನಕಮಜಲು ಬಾಳೆಹಿತ್ಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತಂದು ಅನ್ನಸಂತರ್ಪಣೆ ನಂತರ ಕುಲೆ ಜಾವತೆ, ವರ್ಣರ ಪಂಜುರ್ಲಿ, ರಕ್ತೆಶ್ವರಿ ದೈವದ ಹಾಗೂ ಪಿಲಿಭೂತ ದೈವದ ನೇಮೋತ್ಸವ ನಡೆಯಿತು.
ಏ. 5 ರಂದು ಬೆಳಿಗ್ಗೆ ಶ್ರೀ ಧರ್ಮದೈವದ ನೇಮೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ಕುಪ್ಪೆ ಪಂಜುರ್ಲಿ, ಗುಳಿಗ ಹಾಗೂ ಇತರ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕುಟುಂಬದ ಯಜಮಾನ ಶಿವರಾಮ ಮಾಸ್ತರ್ ಕುದ್ಕುಳಿ, ತರವಾಡು ಮನೆಯ ಯಜಮಾನ ಶೇಷಪ್ಪ ಗೌಡ ಕುದ್ಕುಳಿ, ಸೇರಿದಂತೆ ಕುದ್ಕುಳಿ ಕುಟುಂಬಸ್ಥರು ಭಾಗವಹಿಸಿದ್ದರು.