ಕ್ಯಾಂಪ್ಕೋ ಶಾಖಾ ವ್ಯವಸ್ಥಾಪಕ ರಾಘವರಿಗೆ ಬೀಳ್ಕೊಡುಗೆ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪ್ರತಿಷ್ಠಿತ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಎಸ್ .ಎನ್ ಮನ್ಮಥ ರಿಗೆ ಅಭಿನಂದನೆ ಮತ್ತು ಸಂಘದ ಕ್ಯಾಂಪ್ಕೋ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ರಾಘವ ರವರಿಗೆ ಬೀಳ್ಕೊಡುಗೆ ಸಮಾರಂಭ ಏ.5 ರಂದು ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಗಣೇಶ್ ಪೈ ಸಭಾಧ್ಯಕ್ಷತೆ ವಹಿಸಿದ್ದರು.
“ಮನ್ಮಥರು ಸರಳ, ಸೌಮ್ಯ ಸಹಕಾರಿಯಾಗಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಗುರುತಿಸಿ ಕೊಂಡವರು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ನಮಗೆಲ್ಲರಿಗೂ ಸಂತಸದ ವಿಷಯ. ಮುಂದಿನ ದಿನಗಳಲ್ಲಿ ನಮ್ಮ ಸಹಕಾರ ಸಂಘಗಳಿಗೆ ಅವರಿಂದ ಇನ್ನಷ್ಟು ಸೇವೆ ದೊರಕಲಿ.”
“ನಮ್ಮ ಸಂಘದ ಕ್ಯಾಂಪ್ಕೋ ಶಾಖೆಯ ವ್ಯವಸ್ಥಾಪಕ ರಾಘವರು
ಸದಸ್ಯರೊಂದಿಗೆ ಬೆರೆಯುತ ಕೃಷಿ ಚಟುವಟಿಕೆ ಕುರಿತು ಮಾತಾಡುವ ಉತ್ತಮ ಗುಣ ನಡತೆ ಅವರದು. ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ವರ್ಗಾವಣೆ ಗೊಂಡಿದ್ದಾರೆ.” ಎಂದು ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಕುಳ ಅಭಿನಂದನಾ ಭಾಷಣ ಮಾಡಿದರು.
“ಮನ್ಮಥರು ಒಬ್ಬ ಸಜ್ಜನ, ಎಲ್ಲರೊಂದಿಗೆ ಬೆರೆತು ಪ್ರೀತಿಯಿಂದ ಕಾಣುವ ವ್ಯಕ್ತಿತ್ವದವರು. ಅದಕ್ಕಾಗಿ ಅವರಿಗೆ ಅನೇಕ ಸ್ಥಾನಗಳು ದೊರಕಿದೆ. ಇದೀಗ ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನ ನಿರ್ದೇಶಕರಾಗಿ ಉನ್ನತ ಸ್ಥಾನ ಪಡೆದಿದ್ದಾರೆ”.
” ಕ್ಯಾಂಪ್ಕೋ ಶಾಖೆಯ ವ್ಯವಸ್ಥಾಪಕರಾದ ರಾಘವರು ಸದಸ್ಯರೊಂದಿಗೆ, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ. ಸಂಸ್ಥೆಯು ಬೆಳೆಯಲು ಶ್ರಮಿಸಿದ್ದಾರೆ.” ಎಂದು ಸನ್ಮಾನಿಸಿ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ಯವರು ಮಾತನಾಡಿದರು.
ಸಂಘದ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪಂಜ ಶಾಖೆಯ ಮ್ಯಾನೇಜರ್ ಶ್ರೀಮತಿ ರೇಖಾ ಹಾಗೂ ಸಿಬ್ಬಂದಿಗಳು ಎಸ್ ಎನ್ ಮನ್ಮಥ ರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಸಿಬ್ಬಂದಿ ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಸಂಘದ ನಿರ್ದೇಶಕ ವಾಚಣ್ಣ ಕೆರೆಮೂಲೆ ವಂದಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಲಿಗೋಧರ ಆಚಾರ್ಯ, ಶ್ರೀ ಕೃಷ್ಣ ಭಟ್ ಪಟೋಳಿ, ವಾಚಣ್ಣ ಕೆರೆಮೂಲೆ, ಚಿನ್ನಪ್ಪ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ ಕಾಂಜಿ, ಮುದರ ಐವತ್ತೊಕ್ಲು, ಶ್ರೀಮತಿ ಹೇಮಲತಾ ಚಿದ್ಗಲ್ಲು, ಶ್ರೀಮತಿ ಮೋಹಿನಿ ಬೊಳ್ಮಲೆ, ಸಂಘದ ಸಿಬ್ಬಂದಿಗಳು, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪಂಜ ಶಾಖೆಯ ಮ್ಯಾನೇಜರ್ ಶ್ರೀಮತಿ ರೇಖಾ, ಸಿಬ್ಬಂದಿಗಳು ಉಪಸ್ಥಿತರಿದ್ದರು.