ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ
ಸುಳ್ಯ ಅಂಬಟೆಡ್ಕ ಬಳಿ ಕೆವಿಜಿ ಆಯುರ್ವೇದಿಕ್ ಕಾಲೇಜಿಗೆ ಬರುವ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಒಡೆದು ತುಂಬಾ ದಿನದಿಂದ ಬೃಹತ್ ನೀರು ಪೋಲಾಗಿ ರಸ್ತೆಯಲ್ಲಿ ಹರಿಯುತ್ತಿರುವ ವರದಿಯನ್ನು ಸುದ್ದಿ ವೆಬ್ಸೈಟ್ ನಲ್ಲಿ 2 ದಿನಗಳ ಮುಂಚೆ ಬಿತ್ತರಿಸಲಾಗಿತ್ತು.
ವರದಿ ಬಂದ ಬಳಿಕ ನಾಲ್ಕೈದು ಜನ ಕೆಲಸಗಾರರು ಬಂದು ಸರಿ ಮಾಡುತ್ತಿರುವಂತೆ ಮಾಡಿ ನೀರನ್ನು ರಸ್ತೆಯಿಂದ ತಿರುಗಿಸಿ ಕೆಲ ಬದಿಗೆ ಬಿಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ. ನೀರು ಪೋಲಾಗುವುದನ್ನು ಸರಿ ಪಡಿಸಿಲ್ಲ.
ಈ ಬಿಸಿಲಿನಲ್ಲಿಯೂ ಹನಿ ನೀರಿಗೂ ತತ್ತರಿಸುವ ಸಂದರ್ಭ ಇಲ್ಲಿ ನೀರು ವಾರಕ್ಕಿಂತಲೂ ಹೆಚ್ಚು ದಿನದಿಂದ ಪೋಲಾಗುತ್ತಿದ್ದು, ಈ ಭಾಗದ ವಾರ್ಡ್ ಸದಸ್ಯರಿಗೂ ಗೋಚರಿಸದ್ದು ಆಶ್ಚರ್ಯಕರವಾಗಿದೆ.