ಜೇಸಿಐ ಪಂಜ ಪಂಚಶ್ರೀ , ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಜಂಟಿ ಆಶ್ರಯದಲ್ಲಿ ಮತದಾನ ಜಾಗೃತಿ ಜಾಥ ಏ.6 ರಂದು ಪಂಜದಲ್ಲಿ ನಡೆಯಿತು.
ಪಂಜ ಸಿ ಎ ಬ್ಯಾಂಕ್ ಬಳಿ ನಾಗರಾಜ್ ಎನ್ ಕೆ ಜಾಥಕ್ಕೆ ಚಾಲನೆ ನೀಡಿದರು. ಬಳಿಕ ಪಂಜ ಗ್ರಾಮ ಪಂಚಾಯತ್ ವರೆಗೆ ತೆರಳಿ ಪಂಜ ಜಾಕೆ ಕಾಂಪ್ಲೆಕ್ಸ್ ಎದುರು ಮತದಾನ ಜಾಗೃತಿ ಕುರಿತು ಉಪನ್ಯಾಸ
ನಡೆಯಿತು.
ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಜೇಸಿಐ ಪೂರ್ವ ವಲಯಉಪಾಧ್ಯಕ್ಷ ನಾಗರಾಜ್ ಎನ್ ಕೆ ಉಪನ್ಯಾಸ ನೀಡಿದರು.
ಜೇಸಿಏ ಪಂಜ ಪಂಚಶ್ರೀ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಶ್ರೀಮತಿ ಆರತಿ ಕೆ, ಶ್ರೀಮತಿ ನಮಿತಾ, ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಂ ಏನೆಕಲ್ಲು, ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ,ಪೂರ್ವಾಧ್ಯಕ್ಷರಾದ ಶಶಿಧರ ಪಳಂಗಾಯ ವಾಸುದೇವ ಮೇಲ್ಪಾಡಿ, ಸೋಮಶೇಖರ ನೇರಳ, ನಾಗಮಣಿ ಕೆದಿಲ, ಗುರುಪ್ರಸಾದ್ ತೋಟ, ಉಪಾಧ್ಯಕ್ಷ ವಾಚಣ್ಣ ಕೆರೆಮೂಲೆ ಮತ್ತು ಪ್ರವೀಣ್ ಕಾಯರ, ಗಗನ್ ಕಿನ್ನಿಕುಮೇರಿ , ಜೇಸಿಐ ಸದಸ್ಯರು ವಿದ್ಯಾರ್ಥಿಗಳು,ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೀವನ್ ಮಲ್ಕಜೆ ಸ್ವಾಗತಿಸಿದರು ಶ್ರೀಮತಿ ಆರತಿ ಕೆ ವಂದಿಸಿದರು.