ಬಳ್ಪ : ಸ.ಉ. ಹಿ. ಪ್ರಾ. ಶಾಲೆಯಲ್ಲಿ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ

0

ಬಳ್ಪ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಹೋಟೆಲ್ ಮಾಲಕ ನೀಲೇಶ್ ಪೂಜಾರಿ ಉಪಸ್ಥಿತರಿದ್ದು ಅಡುಗೆ ಸ್ವಾದದ ಕುರಿತು ಮೆಚ್ಚುಗೆ ಸೂಚಿಸಿದರು.

ಬೇಸಿಗೆ ಕಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ವಿವಿಧ ತರಹದ ಆಹಾರವನ್ನು ತಯಾರು ಮಾಡಿ ಖುಷಿಪಟ್ಟರು. ಜ್ಯೂಸ್ ,ಸಲಾಡ್ ,ಕೇಕ್ ಚರಂಬುರಿ ,ಬರ್ಫಿ ,ಕಲ್ಲಂಗಡಿ ಜ್ಯೂಸ್ ,ಆಪಲ್ ಜ್ಯೂಸ್ ,ನೀರು ಸೌತೆ ಮೊದಲಾದವುಗಳನ್ನು ತಯಾರು ಮಾಡಿ ಹಂಚಿ ತಿಂದು ಸಂಭ್ರಮಿಸಿದರು.
ಶಾಲೆಯ ಶಿಕ್ಷಕ ವೃಂದ ಈ ಕಾರ್ಯಕ್ರಮ ಸಂಘಟಿಸಿದರು
.