ಬೆಳ್ಳಾರೆ ಜ್ಞಾನದೀಪದಲ್ಲಿ ರಜಾ ದಿನಗಳ ನವೋದಯ ತರಬೇತಿ ಏ .15ರಿಂದ ಆರಂಭ

0

2024-25ನೇ ಸಾಲಿನಲ್ಲಿ ನವೋದಯ ಮತ್ತು ಮೊರಾರ್ಜಿ ಪ್ರವೇಶ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ರಜಾ ದಿನಗಳಲ್ಲಿ ವಿಶೇಷ ತರಗತಿಗಳು ಎ.15ರಿಂದ ಆರಂಭಗೊಳ್ಳಲಿದೆ.

ಪ್ರಸ್ತುತ 4ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ತರಬೇತಿ ಪಡೆಯಬಹುದು. ಜ್ಞಾನದೀಪ ಸಂಸ್ಥೆಯು ಕಳೆದ 16 ವರ್ಷಗಳಿಂದ ನವೋದಯ ಪ್ರವೇಶ ಪರೀಕ್ಷೆಗೆ ತರಗತಿಗಳನ್ನು ನಡೆಸುತ್ತಿದ್ದು, ಪ್ರಸಕ್ತ ವರ್ಷ ಇಲ್ಲಿ ತರಬೇತಿ ಪಡೆದ 17 ವಿದ್ಯಾರ್ಥಿಗಳು ನವೋದಯ ಶಾಲೆಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಇದುವರೆಗೆ 182 ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷ ರಜಾ ದಿನಗಳಲ್ಲಿ ನವೋದಯ ತರಬೇತಿ ಶಿಬಿರ ಆರಂಭಿಸಲಾಗಿದ್ದು, ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಸಕ್ತ ವಿದ್ಯಾರ್ಥಿಗಳು ಏ.12ರ ಮೊದಲು ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.