ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಪದವಿಪ್ರದಾನ ಸಮಾರಂಭ

0

ವೈದ್ಯರಿಗೆ ಸಮಾಜದಲ್ಲಿ ಹೆಚ್ಚು ಗೌರವ ಇದೆ. ಆ ಗೌರವವನ್ನು ವೈದ್ಯರಾದವರು ಉಳಿಸಿಕೊಳ್ಳಬೇಕು. ನಿಮ್ಮ ಪೋಷಕರು, ಶಿಕ್ಷಕರು ಶ್ರಮಪಟ್ಟು ಓದಿಸುತ್ತಾರೆ. ಅವರ ಶ್ರಮಕ್ಕೆ ನೀವು ಬೆಲೆ ಕೊಡಬೇಕು. ಗೌರವ ನೀಡಬೇಕು.

ಮೊದಲು ರೋಗಿಯ ಮತ್ತು ಕುಟುಂಬದ ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಂಡು ಟ್ರೀಟ್ ಮಾಡಬೇಕು. ಕಾಲಕಾಲಕ್ಕೆ ವೈದ್ಯಕೀಯ ಕ್ಷೇತ್ರದ ಆಧುನೀಕರಣ, ಜ್ಞಾನಗಳ ಬಗ್ಗೆ ಅಪ್ಡೇಟ್ ಆಗುತ್ತಿರಬೇಕು ಎಂದು ಡಾ. ಪದ್ಮಿನಿ ಪ್ರಸಾದ್ ಹೇಳಿದರು.

ಅವರು ಎ. 6ರಂದು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 17ನೇ ಪದವಿಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ, ಹಾಗೂ ಮೆಡಿಕಲ್ ಡೈರೆಕ್ಟರ್ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಮ್ಮ ಮಕ್ಕಳು ವೈದ್ಯರಾಗಬೇಕೆಂಬ ಕನಸು, ಅದಕ್ಕಾಗಿ ಪಟ್ಟ ಶ್ರಮ ಇಂದು ನನಸಾಗಿದೆ. ಸಂಸ್ಥೆಯ ಬೋಧಕ ಸಿಬ್ಬಂದಿಗಳ ಪರಿಶ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡುವಂತಾಯಿತು.

ಇವತ್ತು ಪದವಿ ಸ್ವೀಕರಿಸಿದ ನೀವೆಲ್ಲರೂ ನಿಮ್ಮ ವೃತ್ತಿಯನ್ನು ಮಾನವೀಯತೆಯಿಂದ, ಶ್ರದ್ಧೆಯಿಂದ ಮಾಡಿ. ಅದುವೆ ನೀವು ಪೋಷಕರಿಗೆ ಬೋಧಕರಿಗೆ ಕೊಡುವ ಗೌರವ ಎಂದರು. ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ತುರ್ತು ಚಿಕಿತ್ಸಾ ವಿಭಾಗದ ನಿರ್ದೇಶಕರಾದ ಡಾ. ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಶೈಕ್ಷಣಿಕ ಮ್ಯಾಗಜೀನನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಸಿ. ರಾಮಚಂದ್ರ ಭಟ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಕು. ಶಮಾ ಪ್ರಾರ್ಥಿಸಿದರು.

ಮೈಕ್ರೋ ಬಯಾಲಜಿ ವಿಭಾಗ ಮುಖ್ಯಸ್ಥರಾದ ಡಾ. ನಮೃತಾ ಕೆ.ಜಿ. ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಸಬಿತ್ ರಹಮಾನ್ ಮತ್ತು ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಜನರಲ್ ಮೆಡಿಸಿನ್ ವಿಭಾಗ ಮುಖ್ಯಸ್ಥರಾದ ಡಾ. ಗೋಪಿನಾಥ್ ಪೈ ವಂದಿಸಿದರು.