ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲ್ಲುಗುಂಡಿ ಪೇಟೆಯ ಮುಖ್ಯ ರಸ್ತೆಯಲ್ಲಿ ಪೊಲೀಸರು ಹಾಗೂ ಸಿ ಆರ್ ಪಿ ಎಫ್ ಪಡೆ ವತಿಯಿಂದ ಇಂದು ಪಥ ಸಂಚಲನ ನಡೆಯಿತು.
ಕಲ್ಲು ಗುಂಡಿ ಮುಖ್ಯ ಬೀದಿಗಳಲ್ಲಿ ಸಾಗಿ ಪೊಲೀಸ್ ಔಟ್ ಪೋಸ್ಟ್ ಬಳಿ ಸಮಾಪನ ಗೊಂಡಿತು.ಸಿ ಆರ್ ಪಿ ಎಫ್ ನ 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು,ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು,ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಈರಯ್ಯ ದೂಂತೂರು, ಸರಸ್ವತಿ ಉಪಸ್ಥಿತರಿದ್ದರು.