ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಮಹಿಳಾ ದಿನಾಚರಣೆ

0

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ಇದರ ಮಹಿಳಾ ಘಟಕದ ವತಿಯಿಂದ, ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ ಲಗ್ಗೆರೆಯಲ್ಲಿ ಇತ್ತೀಚೆಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀಮತಿ ಮಂಜುಳಾ ಮಯೂರ್ ಬಂಟೋಡಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಶ್ರೀಮತಿ ವನಿತಾ ರಾಧಾಕೃಷ್ಣ ಗುತ್ತಿಗಾರುಮೂಲೆ ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.

ಬಳಿಕ ದೀಪ ಬೆಳಗುವುದರೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು.

ಮಹಿಳಾ ಘಟಕದ ಸದಸ್ಯರುಗಳಾದ ಶ್ರೀಮತಿ ಕೂಡಕಂಡಿ ಹೊನ್ನಮ್ಮ ಹಾಗೂ ಭುವನೇಶ್ವರಿ ಮೊಟ್ಟೆಮನೆ ಇವರು ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದರು.

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಸೋಮಣ್ಣ ಕುಂಭ ಗೌಡನ ಇವರು ಮಾತನಾಡಿ ನಮ್ಮ ಜನಾಂಗದ ಮಹಿಳೆಯರ ಸಾಧನೆಯನ್ನು ನೆನಪಿಸಿಕೊಂಡು ಅವರನ್ನು ಶ್ಲಾಘಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ ಮಡ್ತಿಲರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

ಪ್ರಾಮಾಣಿಕೃತ ಚೈತನ್ಯ ಚಿಕಿತ್ಸಕರು ಹಾಗೂ ತರಬೇತುದಾರರು ಆಗಿರುವ ಶ್ರೀಮತಿ ರೇಣುಕ ಮುಕ್ಕಾಟಿ ಇವರನ್ನು ಸನ್ಮಾನಿಸಲಾಯಿತು.

ಮಹಿಳಾ ಘಟಕದ ಸದಸ್ಯರಾದ ಶ್ರೀಮತಿ ಲೀಲಾ ಸೋಮಣ್ಣ ಕುಂಭಗೌಡನ ಕಾರ್ಯಕ್ರಮ ನಿರೂಪಿಸಿದರು.

ಯುವ ಘಟಕದ ಖಜಾಂಚಿಯಾದ ನವೀಶ್ ಪೂಣಚ್ಚ ಕುಂಡ್ಯಾನ ಮಾತನಾಡಿ ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.

ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಗಂಗಮ್ಮ ಸುರೇಶ್ ನೆರಿಯನರವರು ಧನ್ಯವಾದಗೈದರು.

ಜಂಟಿ ಕಾರ್ಯದರ್ಶಿಗಳಾದ ಲತಾ ರಾಜೇಶ್ ಕಟ್ರತನ ಹಾಗೂ ಶ್ರೀಮತಿ ಪ್ರಮೋದಿನಿ ನಾಗೇಶ್ ಬಂಟೋಡಿ ಉಳುವಾರನ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ನಂತರ ಶ್ರೀಮತಿ ರೇಣುಕಾ ಮುಕ್ಕಾಟಿಯವರು, ನಮ್ಮ
ಶರೀರದ ಚಕ್ರಗಳನ್ನು ಸಮತೋಲನಗೊಳಿಸಿ, ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಸರಿಪಡಿಸಿಕೊಳ್ಳುವ ಸರಳ ಚಿಕಿತ್ಸಾ ವಿಧಾನವನ್ನು ಪ್ರತ್ಯಕ್ಷವಾಗಿ ಸಭಿಕರಿಗೆ ವಿವರಿಸಿದರು.

ರೇಣುಕಾ ಮುಕ್ಕಾಟಿಯವರ ಚೈತನ್ಯ ಚಿಕಿತ್ಸಾ ಕಾರ್ಯಕ್ರಮವು, ಮಹಿಳಾ ದಿನಾಚರಣೆಯ ಮೆರುಗನ್ನು ಹೆಚ್ಚಿಸಿತು.

ಒಗ್ಗಟ್ಟುಗಳು ಹಾಗೂ ವಿವಿಧ ಲಕ್ಕಿ ಗೇಮ್ಸ್ ಗಳಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.

ವಿಜೇತರರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಸಭಿಕರಿಗೆ ರುಚಿಕರವಾದ ಊಟದ ವ್ಯವಸ್ಥೆ ಮಾಡಲಾಗಿತ್ತು.